VIDEO| ಭೂಮಿ ತಿರುಗುವುದಿಲ್ಲ ಸ್ಥಿರವಾಗಿರುತ್ತದೆ ಎಂದ ಪಾಕ್​ ಪ್ರಜೆ; ಕಾರಣ ಕೇಳಿ ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

Pak Citizen
Published on

ನವದೆಹಲಿ: ಶಾಲೆಯಲ್ಲಿ ನಾವೆಲ್ಲರೂ ಸೌರಮಂಡಲ ಹಾಗೂ ಗ್ರಹಗಳ ಚಲನವಲನದ ಬಗ್ಗೆ ತಿಳಿದುಕೊಂಡಿದ್ದೇವೆ. ವಾಸ್ತವವಾಗಿ ಭೂಮಿಯೂ ಸೂರ್ಯನ ಸುತ್ತ ಅಪ್ರದಕ್ಷಿಣಾಕಾರವಾಗಿ ತಿರುಗುತ್ತದೆ. ಇದು ವಿವಿಧ ಅರ್ಥಗೋಳಗಳಲ್ಲಿ ಹಗಲು ರಾತ್ರಿ ಉಂಟಾಗುತ್ತದೆ ಎಂದು ನಾವು ತಿಳಿದಿದ್ದೇವೆ.

ಇದೀಗ ವ್ಯಕ್ತಿಯೋರ್ವ ಭೂಮಿ ತಿರುಗುವುದಿಲ್ಲ ಬದಲಿಗೆ ಅದರ ಸುತ್ತ ಸೂರ್ಯ ಹಾಗೂ ಚಂದ್ರ ತಿರುಗುತ್ತವೆ ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೃಷ್ಣ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ಇವರ ಹೇಳಿಕೆಯನ್ನು ಕೇಳಿದ ನಂತರ ನಾನು ನನ್ನ ವಿಜ್ಞಾನ ಪುಸ್ತಕಗಳನ್ನು ಸುಟ್ಟು ಹಾಕಿದೆ ಎಂದು ಬರೆದುಕೊಂಡಿದ್ದಾರೆ. ಹಲವರು ಇವನ ಮಾತನು ಕೇಳಿ ನಕ್ಕು ನಕ್ಕು ಸುಸ್ತಾಗಿದ್ದೇವೆ ಎಂದು ಕಮೆಂಟ್​ ಮಾಡಿದ್ದಾರೆ.

ವೈರಲ್​ ವಿಡಿಯೋದಲ್ಲೇನಿದೆ

ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ಭೂಮಿಯು ಸ್ಥಿರವಾಗಿದೆ ಎಂದು ಪ್ರತಿಪಾದಿಸುತ್ತಾನೆ. ಭೂಮಿಯೂ ಸೂರ್ಯನ ಸುತ್ತ ಸುತ್ತುತ್ತದೆ ಎಂಬುದು ಸುಳ್ಳು. ಭೂಮಿ ತಿರುಗದೆ ಸ್ಥಿರವಾಗಿದ್ದು, ಇದರ ಸುತ್ತ ಸೂರ್ಯ-ಚಂದ್ರ ಸುತ್ತುವುದರಿಂದ ಹಗಲು-ರಾತ್ರಿ ಹಾಗೂ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ ಎಂದಿದ್ದಾನೆ.

ಆದ್ದರಿಂದ ಭೂಮಿಯ ಸುತ್ತ ಸೂರ್ಯ ಚಂದ್ರ ತಿರುಗುತ್ತವೆ ಹೊರತು ಅದರ ಸುತ್ತ ಭೂಮಿ ತಿರುಗುವುದಿಲ್ಲ ಎಂದು ಹೇಳುವ ಮೂಲಕ ವ್ಯಕ್ತಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಿಡಿಯೋ ಇಲ್ಲಿಯವರೆಗೂ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದ್ದು, ಅನೇಕರು ವ್ಯಕ್ತಿಯ ಹೇಳಿಕೆ ಹಾಗೂ ಆತನ ದೇಶವನ್ನು ಟೀಕಿಸಿ ಕಮೆಂಟ್​ ಬರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net