

ಇಸ್ಲಮಾಬಾದ್: ಕರೊನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಧರ್ಮಗುರುವೊಬ್ಬ ಮಹಿಳೆಯರನ್ನು ಅವಹೇಳನ ಮಾಡಿದ್ದಾನೆ. ಅದೂ ಪ್ರಧಾನಿ ಇಮ್ರಾನ್ ಖಾನ್ ಅವರ ಎದುರಿನಲ್ಲಿ..!
ಟಿವಿ ಚಾನಲ್ವೊಂದರಲ ಲೈವ್ ಶೋನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಧರ್ಮಗುರು ಮೌಲಾನಾ ತಾರೀಕ್ ಜಮೀಲ್ ಕೂಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಮೀಲ್ ಕೊವಿಡ್ ಬಗ್ಗೆ ಮಾತನಾಡುತ್ತರ, ಕರೊನಾ ವೈರಸ್ ಮನುಕುಲಕ್ಕೆ ಬಂದಿದ್ದರು ಮಹಿಳೆಯರಿಂದ. ಸ್ತ್ರೀಯರು ಮಾಡುವ ತಪ್ಪು ಕೆಲಸ, ಕಾನೂನು ಬಾಹಿರ, ಅನೈತಿಕ ಕಾರ್ಯಗಳಿಂದಲೇ ಕೊವಿಡ್ ಮನುಕುಲದ ಬೆನ್ನುಬಿದ್ದಿದೆ ಎಂದು ಹೇಳಿದರು.
ಮಹಿಳೆಯರಿಗೆ ಅಪಮಾನ ಆಗುವಂತಹ ಇಂಥ ಮಾತುಗಳನ್ನು ಮೌಲಾನಾ ಹೇಳುತ್ತಿದ್ದರೂ ಅದನ್ನು ಇಮ್ರಾನ್ ಖಾನ್ ತಡೆಯಲಿಲ್ಲ. ಆ ಬಗ್ಗೆ ಪ್ರಶ್ನೆಯನ್ನೂ ಮಾಡಲಿಲ್ಲ.
ಅಷ್ಟೇ ಅಲ್ಲ ಮೌಲಾನಾ ಜಮೀಲ್ ಅವರು ಮಾಧ್ಯಮಗಳನ್ನೂ ದೂಷಿಸಿದರು. ಸದಾ ಸುಳ್ಳುಗಳನ್ನೇ ಪ್ರಸಾರ ಮಾಡುತ್ತವೆ ಎಂದು ಆರೋಪಿಸಿದರು.
ಮೌಲಾನಾ ಅವರ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರು ಮಾಧ್ಯಮಗಳ ಬಳಿ ಕ್ಷಮೆ ಕೇಳಿದರು. ಆದರೆ ಮಹಿಳೆಯ ಬಗ್ಗೆ ಕೆಟ್ಟದಾಗಿ ನೀಡಿದ ಹೇಳಿಕೆಗೆ ಯಾವುದೇ ಕ್ಷಮಾಪಣೆ ಕೋರಲಿಲ್ಲ.
ಪಾಕಿಸ್ತಾನದ ಮಾನವ ಹಕ್ಕು ಆಯೋಗ ಮೌಲಾನಾ ವಿರುದ್ಧ ತಿರುಗಿ ಬಿದ್ದಿದೆ. ಮೌಲಾನಾ ತಾರೀಕ್ ಜಮೀಲ್ ಅವರು ಕೊವಿಡ್ ವಿಚಾರಕ್ಕೆ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಇದು ನಮಗೆ ಅಚ್ಚರಿ ಮೂಡಿಸಿದೆ. ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಅದರಲ್ಲೂ ಟಿವಿ ಚಾನಲ್ಗಳ ಕಾರ್ಯಕ್ರಮದಲ್ಲಿ ಹೀಗೆ ಮಾತನಾಡಬಾರದಿತ್ತು ಎಂದು ಟ್ವೀಟ್ ಮಾಡಿದೆ.
ಹಾಗೇ ಪಾಕಿಸ್ತಾನದ ಮೇನ್ಸ್ಟ್ರೀಮ್ ಪತ್ರಿಕೆ ಡಾನ್ ಕೂಡ ಮೌಲಾನಾ ವಿರುದ್ಧ ಸಂಪಾದಕೀಯ ಬರೆದಿದೆ. ಇದೊಂದು ನಾಚಿಕೆ ಹುಟ್ಟಿಸುವ ಹೇಳಿಕೆ ಎಂದು ಹೇಳಿದೆ.
ಪಾಕಿಸ್ತಾನದ ಕರೊನಾ ಸೋಂಕಿತ ಸಂಖ್ಯೆ 13,304ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 18 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 272ರಷ್ಟಾಗಿದೆ. (ಏಜೆನ್ಸೀಸ್)