

PM Shehbaz Sharif: ಭಾರತದೊಂದಿಗೆ ಜಮ್ಮು&ಕಾಶ್ಮೀರ, ಭಯೋತ್ಪಾದನೆ ಮತ್ತು ವ್ಯಾಪಾರದ ಕುರಿತು ಮಾತುಕತೆ ನಡೆಸಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಈ ಬಗ್ಗೆ ಲಂಡನ್‌ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ, ಕಾಶ್ಮೀರ ವಿಷಯಕ್ಕೆ ಪರಿಹಾರವಿಲ್ಲದೆ, ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಷರೀಫ್ ತಿಳಿಸಿದ್ದಾರೆ. ಅಲ್ಲದೆ, ನಾನು ಈ ಹಿಂದೆ ಹಲವು ಬಾರಿ ಈ ಪ್ರಸ್ತಾಪವನ್ನು ಮಾಡಿದ್ದೇನೆ. ಪಾಕ್ ಭಾರತದೊಂದಿಗೆ ಕಾಶ್ಮೀರ, ನೀರು, ವ್ಯಾಪಾರ ಮತ್ತು ಭಯೋತ್ಪಾದನಾ ಸಮಸ್ಯೆಗಳನ್ನು ಚರ್ಚಿಸಲು ಬಯಸುತ್ತದೆ. ಇದು ಯಾವುದೇ ದೌರ್ಬಲ್ಯದಿಂದಾಗಿ ಅಲ್ಲ. ಆದರೆ, ಸಮಾನ ನಿಯಮಗಳ ಆಧಾರದ ಮೇಲೆ ಒಪ್ಪಂದ ಮಾಡಿಕೊಳ್ಳುಲು ಬಯಸುತ್ತೇವೆ ಎಂದು ಷರೀಫ್ ಸೂಚಿಸಿದ್ದಾರೆ.
ಭಯೋತ್ಪದನೆಯ ಬಗ್ಗೆ ಮಾತನಾಡಿದ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ಭಾರತವು ಪಾಕಿಸ್ತಾನಕ್ಕೆ ತನ್ನ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳ ಬಗ್ಗೆ ತಿಳಿಸಿತು. ಭಾರತವನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತ ಭಯಭೀತಗೊಳಿಸಿದ ಈ ನಿರ್ದಿಷ್ಟ ದಾಳಿಯನ್ನು ಲಷ್ಕರ್-ಎ-ತೈಬಾ (LeT) ನ ಒಂದು ಅಂಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನಡೆಸಿತು ಎಂದು ಹೇಳಿದ್ದಾರೆ.
ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕೆಲವು ದಿನಗಳ ಸರಿ, ನಾವು 3 ದಶಕಗಳಿಂದ ಅಮೆರಿಕಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ. ಪಾಕಿಸ್ತಾನವು ಈ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸಿ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ದೀರ್ಘ ಇತಿಹಾಸವನ್ನು ಹೊಂದಿದೆಯೇ? ಎಂದು ಕೇಳಿದ ಪ್ರಶ್ನೆಗೆ ಈ ರೀತಿಯ ಉತ್ತರ ನೀಡಿದ್ದಾರೆ.
ಈಗ, ಪಾಕಿಸ್ತಾನಿ ವಾಯುಪಡೆಯು ತನ್ನದೇ ಪ್ರಾಂತ್ಯದ ಮೇಲೆ ದಾಳಿ ಮಾಡಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಜನರನ್ನು ಕೊಂದಿದೆ. ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದಲ್ಲಿ ಮೃತರ ಶವಗಳನ್ನು ಮನೆಗಳಿಂದ ಹೊರತರುತ್ತಿರುವ ವೀಡಿಯೊಗಳು ಕಂಡು ಬಂದಿವೆ. ಸೆಪ್ಟೆಂಬರ್ 22ರ ಬೆಳಗಿನ ಜಾವ, ಪಾಕ್ ಪಡೆಗಳು JF-17 ಫೈಟರ್ ಜೆಟ್‌ಗಳಿಂದ ಎಂಟು LS-6 ಬಾಂಬ್‌ಗಳನ್ನು ಬೀಳಿಸಿದವು. (ಏಜೆನ್ಸೀಸ್)