ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಪಾಕಿಸ್ತಾನ; ಪೆಟ್ರೋಲ್​ಗೆ 272 ರೂ.!

Pakistan-govt-lifts-petrol-diesel-prices
Published on

ಇಸ್ಲಾಮಾಬಾದ್: ವಿದ್ಯುತ್, ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪಾಕಿಸ್ತಾನ ಸರ್ಕಾರ ಮಿನಿ ಬಜೆಟ್ ಮಾಡಿದ ಬಳಿಕ ಗುರುವಾರದಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಯನ್ನು ಐತಿಹಾಸಿಕ ಗರಿಷ್ಠ ಮಟ್ಟದಲ್ಲಿ ಏರಿಕೆ ಮಾಡಿದೆ.

ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 22.20 ರೂ. (ಪಾಕ್ ಕರೆನ್ಸಿ) ಹೆಚ್ಚಿಸಿದ್ದು, ಇದರಿಂದ ಲೀಟರ್ ಪೆಟ್ರೋಲ್ ಬೆಲೆ 272 ರೂ. ಆಗಿದೆ. ಹೈಸ್ಪೀಡ್ ಡೀಸೆಲ್ ಬೆಲೆ 17.20 ರೂ., ಸೀಮೆಎಣ್ಣೆ ಬೆಲೆ 12.90 ಹಾಗೂ ಲೈಟ್ ಡೀಸೆಲ್ ಬೆಲೆ 9.68 ರೂ. ಹೆಚ್ಚಳವಾಗಿದೆ. ಇದರಿಂದ ಡೀಸೆಲ್ ಬೆಲೆ ಲೀಟರ್​ಗೆ 280, ಸೀಮೆಎಣ್ಣೆ 202.73, ಮತ್ತು ಲೈಟ್ ಡೀಸೆಲ್ ಬೆಲೆ 196.68 ರೂ. ಆಗಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್ ) ನಿರ್ಣಾಯಕ ಸಾಲದ ಭಾಗವನ್ನು ಅನ್ಲಾಕ್ ಮಾಡಲು ಪಾಕ್ ಪ್ರಯತ್ನಿಸುತ್ತಿದೆ ಎಂದು ವರದಿ ಹೇಳಿದೆ. ಪೆಟ್ರೋಲ್ ಬೆಲೆ ಹೆಚ್ಚಳದ ನಂತರ ಪಾಕಿಸ್ತಾನದಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net