

Pakistan Inflicted: ಗುರುವಾರ (ಮೇ.08) ರಾತ್ರಿ ಪಾಕಿಸ್ತಾನದ ಯುದ್ಧ ಮಾತಿಗೆ ತಕ್ಕ ಉತ್ತರವನ್ನೇ ರವಾನಿಸಿರುವ ಭಾರತೀಯ ಸೇನೆ, ಪ್ರತೀಕಾರದ ಬಿಸಿಯನ್ನು ಈಗಾಗಲೇ ಪಾಕಿಸ್ತಾನಕ್ಕೆ ಮುಟ್ಟಿಸಿದೆ. ಲಾಹೋರ್, ರಾವಲ್ಪಿಂಡಿ, ಕರಾಚಿ ಬಂದರು ಸೇರಿದಂತೆ ಪಾಕ್ನ ಹಲವು ಪ್ರದೇಶಗಳು ಭಾರತದ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ತತ್ತರಿಸಿ ಹೋಗಿವೆ. ಸದ್ಯ ಪಾಕ್ ಪರಿಸ್ಥಿತಿ ಹೀನಾಯವಾಗಿದ್ದು, ಇದೀಗ ಇತರೆ ದೇಶಗಳ ಬಳಿ ಸಾಲಕ್ಕೆ ಕೈಚಾಚಿರುವುದು ವರದಿಗಳ ಮೂಲಕ ಸ್ಪಷ್ಟವಾಗಿದೆ.
"ನಮಗೆ ಶತ್ರುವಿನಿಂದ ಭಾರೀ ನಷ್ಟ ಉಂಟಾಗಿದೆ. ಸದ್ಯದ ಯುದ್ಧ ಭೀತಿ ಹಾಗೂ ಷೇರು ಪೇಟೆ ಕುಸಿತದಿಂದ ನಮ್ಮ ಅಂತಾರಾಷ್ಟ್ರೀಯ ಪಾಲುದಾರರ ಬಳಿ ಹಣದ ಸಹಾಯ ಕೇಳಲಾಗಿದೆ. ಪರಿಸ್ಥಿತಿಗೆ ಕಾರಣವಾಗಿರುವ ನಿರ್ಧಾರವನ್ನು ಹಿಂಪಡೆಯಲು ಸೂಚಿಸಿ" ಎಂದು ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಇದೇ ಸಮಯದಲ್ಲಿ ಜಾರಿಕೊಳ್ಳುವ ಪ್ರಯತ್ನ ಮಾಡಿರುವ ಪಾಕ್, 'ನಾವು ಈ ರೀತಿ ಪೋಸ್ಟ್ ಮಾಡಿಲ್ಲ. ನಮ್ಮ ಎಕ್ಸ್ ಖಾತೆ ಹ್ಯಾಕ್ ಮಾಡಲಾಗಿದೆ' ಎಂದು ಹೇಳುವ ಮೂಲಕ ಟೀಕೆ, ಟಿಪ್ಪಣಿಗಳಿಂದ ಹಿಂದೆ ಸರಿದಿದೆ. ಇದು ಹಲವರ ಗೊಂದಲ, ಅನುಮಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).