ಭಾರತವು ಭವಿಷ್ಯದಲ್ಲಿ ನಮ್ಮ ಮೇಲೆ ಯಾವುದೇ ದಾಳಿ ಮಾಡಿದರೆ, ಸೂಕ್ತ ಪ್ರತಿಕ್ರಿಯೆ ನೀಡುತ್ತವೆ: ಪಾಕ್​ ರಕ್ಷಣಾ ಸಚಿವ ಆಸಿಫ್ ಎಚ್ಚರಿಕೆ| Khawaja Asif

Khawaja Asif
Published on

Khawaja Asif: ಭಾರತವು ಪಾಕಿಸ್ತಾನದ ಜತೆ ಭವಿಷ್ಯದಲ್ಲಿ ಯಾವುದೇ ಮಿಲಿಟರಿ ಸಂಘರ್ಷಕ್ಕೆ ಬಂದರೇ ಅಂತಹ ಯುದ್ಧದ ಸಂದರ್ಭದಲ್ಲಿ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ಪಾಕ್​ ರಕ್ಷಣಾ ಸಚಿವ ಖವಾಜಾ ಆಸಿಫ್ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಪಾಕ್​​​ ರಕ್ಷಣಾ ಸಚಿವ, ಭಾರತೀಯ ಮಿಲಿಟರಿ ಮತ್ತು ರಾಜಕೀಯ ನಾಯಕರ ಇತ್ತೀಚಿನ ಕೆಲವು ಹೇಳಿಕೆಗಳು ತಮ್ಮ ಕಳೆದುಹೋದ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಲು ವಿಫಲ ಪ್ರಯತ್ನ ಎಂದು ಕರೆದಿದ್ದಾರೆ. ಪಾಕ್​​​​​​​ ಮಾತಿನಲ್ಲಿ ಹೇಳುವುದಾದರೆ ಮೇ ಘರ್ಷಣೆಗಳಲ್ಲಿನ ಸೋಲಿನ ನಂತರದ ಒತ್ತಡದ ಪರಿಣಾಮವಾಗಿದೆ ಎಂದಿದ್ದಾರೆ.

ಭಾರತೀಯ ಮಿಲಿಟರಿ ಮತ್ತು ರಾಜಕೀಯ ನಾಯಕರ ಹೇಳಿಕೆಗಳು ನಮ್ಮ ಮೇಲಿನ ಕಳಂಕಿತ ಖ್ಯಾತಿಯನ್ನು ಪುನಃಸ್ಥಾಪಿಸುವ ವಿಫಲ ಪ್ರಯತ್ನವಾಗಿದೆ. ಅಲ್ಲದೆ, 0-6 ಅಂಕಗಳೊಂದಿಗೆ ಇಂತಹ ನಿರ್ಣಾಯಕ ಸೋಲಿನ ನಂತರ, ಭಾರತ ಮತ್ತೊಮ್ಮೆ ಪ್ರಯತ್ನಿಸಿದರೆ, ದೇವರು ಇಚ್ಛಿಸಿದರೆ, ಅಂಕಗಳು ಮೊದಲಿಗಿಂತ ಉತ್ತಮವಾಗಿರುತ್ತವೆ ಎಂದು ಅಸೀಫ್​ ಹೇಳಿದ್ದಾರೆ.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿಯವರ ಪಾಕಿಸ್ತಾನಕ್ಕೆ ಯಾವುದೇ ದುಸ್ಸಾಹಸ ಮಾಡದಂತೆ ಎಚ್ಚರಿಕೆ ನೀಡಿದ ಕೆಲವು ದಿನಗಳ ನಂತರ ಆಸಿಫ್​​ರ ಪ್ರತಿಕ್ರಿಯೆ ಬಂದಿದೆ.

ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತೀಯ ದಾಳಿಯಲ್ಲಿ ಅಮೆರಿಕ ಮೂಲದ ಎಫ್ -16 ಜೆಟ್‌ಗಳು ಸೇರಿದಂತೆ ಕನಿಷ್ಠ ಒಂದು 12ಕ್ಕೂ ಹೆಚ್ಚು ಪಾಕಿಸ್ತಾನಿ ಮಿಲಿಟರಿ ವಿಮಾನಗಳು ನಾಶವಾಗಿವೆ ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಶುಕ್ರವಾರ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net