

ಕಾಬೂಲ್:ಪೂರ್ವ ಅಪಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 27 ಮಹಿಳೆಯರು ಸೇರಿದಂತೆ 46 ನಾಗರಿಕರು ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಸರ್ಕಾರ ಬುಧವಾರ ಹೇಳಿಕೊಂಡಿದೆ.
ಇನ್ನು ಮತ್ತೊಂದು ಮಾಹಿತಿ ಪ್ರಕಾರ, ದಾಳಿಯಲ್ಲಿ ಒಟ್ಟು 50 ಜನರು ಬಲಿಯಾಗಿದ್ದು, ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ತೇಹರ್ರಿಕ್-ಎ-ತಾಲಿಬಾಲ್ ವಕ್ತಾರ ಮೊಹ್ಮದ್ ಖುರಸಾನಿ ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಇನ್ನು ದಾಳಿಯ ಬಗ್ಗೆ ಪಾಕಿಸ್ತಾನದ ಯಾವುದೇ ಅಧಿಕೃತ ಹೇಳಿಕೆಗಳು ಹೊರ ಬಂದಿಲ್ಲ. ಮೂಲದ ಪ್ರಕಾರ ಅಪಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಬಂಡುಕೋರರು ದಂಗೆ ಎದ್ದಿದ್ದು, ಅವರ ಹುಟ್ಟಡಗಿಸಲು ದಾಳಿ ನಡೆಸಲಾಗಿದೆ ದಾಳಿಯಲ್ಲಿ ಒಟ್ಟು 13 ಬಂಡುಕೋರರನ್ನು ಹೊಡೆದುರುಳಿಸಲಾಗಿದೆ ಎಂದು ಮಂಗಳವಾರ ಪಾಕಿಸ್ತಾನ ಸೇನೆ ಹೇಳಿದೆ ಎಂದು ವರದಿಯಾಗಿದೆ.
ಇನ್ನು ಈ ವೈಮಾನಿಕ ದಾಳಿದಿಂದ ಎರಡು ದೇಶಗಳ ನಡುವೆ ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿದ್ದು, ದಾಳಿಯನ್ನು ತಾಲಿಬಾನ್ ಸರ್ಕಾರ ಖಂಡಿಸಿದೆ. ಅಲ್ಲದೆ, ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಕಾರ ಮುಂದಿನ ದಿನಗಳಲ್ಲಿ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹೇಳಿದೆ,(ಏಜೆನ್ಸೀಸ್).