ಪಾಕ್​ ಪ್ರಧಾನಿ ಕಾರ್ಯಕ್ರಮದಿಂದ ಕೆಲಸ ಕಳೆದುಕೊಂಡ 17 ಮಂದಿ: ಕಾರಣ ಇಲ್ಲಿದೆ

Pak Tv
Published on

ಇಸ್ಲಮಾಬಾದ್​: ಇತ್ತೀಚೆಗೆ ಪಾಕಿಸ್ತಾನದಲ್ಲಿ ನೂತನ ಪ್ರಧಾನಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಈ ನೂತನ ಪ್ರಧಾನಿಯ ವಿಚಾರವಾಗಿ ಪಾಕ್​​, ಟಿವಿ ಮಾಧ್ಯಮದ 17 ಅಧಿಕಾರಿಗಳು ಈಗ ಕೆಲಸ ಕಳೆದುಕೊಳ್ಳುವಂತಾಗಿದೆ.

ಕೆಲಸ ಕಳೆದುಕೊಳ್ಳುವುದಕ್ಕೂ ಇದಕ್ಕೂ ಏನು ಸಂಬಂಧ ಎಂದು ತಲೆಕೆಸಿಕೊಳ್ಳಬಹುದು. ಇದಕ್ಕೆ ಕಾರಣ ಇಲ್ಲಿದೆ. ರಂಜಾನ್​ ಆಚರಣೆ ಹಿನ್ನಲೆಯಲ್ಲಿ ಪ್ರಧಾನಿ ಶೆಹಬಾಜ್​ ಷರೀಫ್​​ ಅವರು ಕಳೆದ ವಾರ ಲಾಹೋರ್​ನ ಲೋಕಪತ್​ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ಎಲ್ಲಾ ಮಾಧ್ಯಮಗಳು ಅಲ್ಲಿದ್ದವು. ಪ್ರಧಾನಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದವು. ಆದರೆ ಪಾಕ್​​ ಪಿಟಿವಿ ಮಾತ್ರ ಪ್ರಧಾನಿ ಕಾರ್ಯಕ್ರಮವನ್ನು ಪ್ರಸಾರ ಮಾಡುವಲ್ಲಿ ವಿಫಲವಾಗಿತ್ತು. ಏಕೆಂದರೆ ಇವರ ಬಳಿ ಉತ್ತಮ ಗುಣಮಟ್ಟದ ಲ್ಯಾಪ್​ಟ್ಯಾಪ್​ ಇರಲಿಲ್ಲವಂತೆ.

ಏನೇ ಆದರೂ ಪ್ರಧಾನಿ ಕಾರ್ಯಕ್ರಮ ಪ್ರಸಾರ ಮಾಡದಿದ್ದಕ್ಕೆ 17 ಮಂದಿ ಅಧಿಕಾರಿಗಳು ಮಾತ್ರ ಕೆಲಸ ಕಳೆದುಕೊಳ್ಳುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net