

ಬೆಂಗಳೂರು: (Menstrual Sick Leave) ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳ ಮಹಿಳಾ ಉದ್ಯೋಗಿಗಳಿಗೆ ಒಡಿಶಾ ಮಾದರಿಯಲ್ಲಿ ತಿಂಗಳಿಗೆ ಒಂದು ದಿನ ವೇತನಸಹಿತ ಮುಟ್ಟಿನ ರಜೆ ನೀಡಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸುಪ್ರೀಂ ಕೋರ್ಟ್ ಆಶಯಕ್ಕೆ ಅನುಗುಣವಾಗಿ ಈ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಪ್ರಸ್ತಾವನೆ ಸಚಿವ ಸಂಪುಟದ ಮುಂದೆ ಬಂದಿರುವುದಾಗಿ ತಿಳಿದು ಬಂದಿದೆ.
ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಮುಟ್ಟಿನ ರಜೆ ಅನುಭೂತಿ ಮತ್ತಷ್ಟು ಬಲ ಪಡೆದುಕೊಂಡಿದೆ. ಒಡಿಶಾ ಮಾದರಿಯಲ್ಲಿ ತಿಂಗಳಿಗೆ ಒಂದು ದಿನ ವೇತನಸಹಿತ ಮುಟ್ಟಿನ ರಜೆ ನೀಡಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಸರ್ಕಾರಿ ಹಾಗೂ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ 'ವೇತನಸಹಿತ ಋತುಚಕ್ರ ರಜೆ ನೀತಿ' ಸಾಧಕ-ಬಾಧಕ ಅವಲೋಕಿಸಿದ್ದು, ಜಾರಿಗೆ ಕಾಲ ಕೂಡಿ. ಬಂದಿದೆ ಎಂದು ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟ್ ಆಶಯಕ್ಕೆ ಅನುಗುಣವಾಗಿ ಈ ನೀತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ತಜ್ಞರು, ಕಾನೂನು, ಆರ್ಥಿಕ, ಆಡಳಿತಾತ್ಮಕ ವರದಿ ಪಡೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರಿ ಹಾಗೂ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ 'ವೇತನಸಹಿತ ಋತುಚಕ್ರ ರಜೆ ನೀತಿ' ಸಾಧಕ-ಬಾಧಕ ಅವಲೋಕಿಸಿದ್ದು, ಜಾರಿಗೆ ಕಾಲ ಕೂಡಿ. ಬಂದಿದೆ ಎಂದು ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟ್ ಆಶಯಕ್ಕೆ ಅನುಗುಣವಾಗಿ ಈ ನೀತಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ತಜ್ಞರು, ಕಾನೂನು, ಆರ್ಥಿಕ, ಆಡಳಿತಾತ್ಮಕ ವರದಿ ಪಡೆದುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಾರ್ವಜನಿಕರ ಸಲಹೆ ಸ್ವೀಕಾರ: ಸರ್ಕಾರಿ ಹಾಗೂ ಖಾಸಗಿ ವಲಯದ ಮಹಿಳಾ ನೌಕರರಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಕುರಿತು ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಸರ್ಕಾರ ಸ್ವೀಕರಿಸಿದೆ. ವೇತನಸಹಿತ ರಜೆ ನೀಡುವ ಸಂಬಂಧ ಕಾರ್ಮಿಕ ಇಲಾಖೆಯು ಕ್ರೈಸ್ಟ್ ವಿವಿ ಕಾನೂನು ವಿಭಾಗದ ಮುಖ್ಯಸ್ಥೆ ಡಾ.ಎಸ್.ಸಪ್ಪಾ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ವರದಿ ಕೂಡ ಪಡೆದುಕೊಂಡಿದೆ. ಅಂತಾರಾಷ್ಟ್ರೀಯಮಟ್ಟದಲ್ಲಿ ಅಂಗೀಕರಿಸಿದ ಮಾನದಂಡದಂತೆ ರಾಜ್ಯ ಸರ್ಕಾರವೂ ಒಡಿಶಾ ಮಾದರಿಯಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಬೇಕೆಂಬ ಬೇಡಿಕೆಗೆ ಈ ವರದಿ ಒತ್ತಾಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ, ಖಾಸಗಿ ಉದ್ಯೋಗ ರಂಗದಲ್ಲಿ ಮಹಿಳಾ ನೌಕರರ ಪಾತ್ರ ಮಹತ್ವದ್ದಾಗಿದೆ. ಚಾಕಚಕ್ಯತೆ, ಕಠಿಣ ಪರಿಶ್ರಮ ಜೀವಿಗಳೂ ಆಗಿದ್ದು, ಸರ್ಕಾರ ಮಹಿಳಾ ಸಂವೇದನಾಶೀಲವಾಗಿ ಯೋಚಿಸುವ ಅಗತ್ಯವಿದೆ ಎಂದು ಸಂಘಟನೆಗಳು ಪದೇಪದೆ ಒತ್ತಾಯಿಸುತ್ತಲೇ ಬಂದಿವೆ.
ಏನಿದರ ಉದ್ದೇಶ?: ಲಿಂಗ ತಾರತಮ್ಯ ನಿವಾರಣೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸರ್ಕಾರಿ, ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಪರಿಚಯಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ.
ತಿಂಗಳಲ್ಲಿ ಮೂರು ದಿನ, ವಾರ್ಷಿಕ ಆರು ದಿನಗಳ ವೇತನಸಹಿತ ಮುಟ್ಟಿನ ರಜೆ ಬಗ್ಗೆ ಸಾಕಷ್ಟು ಚರ್ಚೆ, ಅಭಿಪ್ರಾಯಗಳ ವಿನಿಮಯವಾಗಿವೆ. ತಿಂಗಳಲ್ಲಿ ಮೂರು ದಿನ ರಜೆ ಕಾರ್ಯಸಾಧುವಲ್ಲ ಎಂದು ಆರ್ಥಿಕ ಇಲಾಖೆ, ಖಾಸಗಿ ವಲಯ ಅಪಸ್ವರ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.
ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಾರ್ವಜನಿಕರ ಸಲಹೆ, ಸೂಚನೆಗಳು, ತಜ್ಞರ ಸಮಿತಿ ವರದಿ ಪರಿಶೀಲಿಸಿದ ಕಾರ್ಮಿಕ ಇಲಾಖೆ, ವಿವಿಧ ಇಲಾಖೆಗಳೊಂದಿಗೆ ಸಮಾಲೋಚಿಸಿ, ಒಡಿಶಾ ಮಾದರಿಯಲ್ಲಿ ತಿಂಗಳಿಗೆ ಒಂದು ದಿನ 'ವೇತನಸಹಿತ ಋತುಚಕ್ರ ರಜೆ ನೀತಿ' ಅಂತಿಮಗೊಳಿಸಿ, ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಗೆ ಸಲ್ಲಿಸಿದೆ. ಋತುಚಕ್ರದ ಅವಧಿಯಲ್ಲಿ ಉಂಟಾಗುವ ಅಸ್ವಸ್ಥತೆ ತಗ್ಗಿಸಲು, ಆರೋಗ್ಯಕ್ಕೆ ಆದ್ಯತೆ ನೀಡಲು ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಆಶಯಕ್ಕೆ ಅನುಗುಣವಾಗಿ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದಿಡಲಾಗಿದೆ ಎಂದು ಕಾರ್ಮಿಕ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಅನ್ಯ ರಾಜ್ಯಗಳು, ಕಂಪನಿಗಳ ಮೇಲ್ಪಂಕ್ತಿ:
ಏಸರ್ ಇಂಡಿಯಾ ಸೇರಿ ಕೆಲವು ಖಾಸಗಿ ಕಂಪನಿಗಳು ಸ್ವಯಂಪ್ರೇರಿತವಾಗಿ ಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಮುಟ್ಟಿನ ರಜೆ ಅಳವಡಿಸಿಕೊಂಡು, ಲಿಂಗ ಸಮಾನತೆಗೆ ಪ್ರೋತ್ಸಾಹಿಸಿವೆ. ಬಿಹಾರ ಸರ್ಕಾರ 1992ರಲ್ಲೇ ರಾಜ್ಯ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಮುಟ್ಟಿನ ರಜೆ ಅನ್ವಯಿಸಿದೆ. ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ಮುಟ್ಟಿನ ರಜೆ ನೀತಿಯು 2023ರಿಂದ ಜಾರಿಗೆ ಬಂದಿದ್ದರೆ, ಒಡಿಶಾ ಸರ್ಕಾರ ಈ ನೀತಿಯನ್ನು ಸರ್ಕಾರಿ ಮತ್ತು ಖಾಸಗಿ ವಲಯಕ್ಕೆ ಪರಿಚಯಿಸಿದೆ.
(ಅಂದಾಜು ಅಂಕಿ-ಅಂಶ) ಆ ರಾಜ್ಯ ಸರ್ಕಾರ- 1.80 ಲಕ್ಷ ಸಿದ್ದ ಉಡುಪು ಕ್ಷೇತ್ರ- 5 ಲಕ್ಷ, ಇತರ ವಲಯ- 1 ಲಕ್ಷ ಐಟಿ-ಬಿಟಿ ಇತರ ಉದ್ಯಮ- ಒಟ್ಟು ಉದ್ಯೋಗಗಳಲ್ಲಿ ಶೇ.30
ಮಹಿಳಾ ಉದ್ಯೋಗಿಗಳು ಎಲ್ಲೆಲ್ಲಿ ಎಷ್ಟು?
| ಪ್ರೊ.ಕಲಾ ಸೀತಾರಾಮನ್ ಶ್ರೀಧರ ನಗರ ವಿದ್ಯಮಾನಗಳ ಸಂಶೋಧನಾ ಕೇಂದ್ರ, ಐಸೆಕ್
ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಎರಡು ದಿನ ವೇತನ ಸಹಿತ ರಜೆ ನೀಡಿದರೆ ಉದ್ಯೋಗ ಕ್ಷೇತ್ರದಲ್ಲಿ ಮಹಿಳಾ ಶ್ರಮಶಕ್ತಿ ವೃದ್ಧಿಸಲಿದೆ. ಅಷ್ಟೇ ಅಲ್ಲ, ಜಾಗತಿಕ ಜಿಡಿಪಿ ವೃದ್ಧಿ ವರದಿಗೆ ಪೂರಕವಾದ ನಡೆಯಾಗಲಿದೆ.
| ಸಿ.ಎಸ್.ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಒಡಿಶಾ ಸರ್ಕಾರದ ಮಾದರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ ನೀಡಬೇಕು ಎಂದು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮಹಿಳಾ ಉದ್ಯೋಗಿಗಳ ಋತುಚಕ್ರದ ಸಂಕಷ್ಟ, ಸಮಸ್ಯೆಯನ್ನು ಪದೇಪದೆ ಸರ್ಕಾರದ ಗಮನಕ್ಕೆ ತಂದಿದ್ದು, ಕನಿಷ್ಠಪಕ್ಷ ತಿಂಗಳಿಗೆ ಒಂದು ದಿನ ವೇತನಸಹಿತ ರಜೆ ನೀಡಲು ಆಗ್ರಹಿಸಲಾಗಿದೆ.
| ವರಲಕ್ಷ್ಮಿ ಸಿಐಟಿಯು ರಾಜ್ಯಾಧ್ಯಕ್ಷೆ
| ಡಾ.ಚನ್ನಮ್ಮ ಕಂಬಾರ ನಗರ ವಿದ್ಯಮಾನಗಳ ಸಂಶೋಧನಾ ಕೇಂದ್ರ, ಐಸೆಕ್
ಬಡತನ, ಮನೆ ಒಳ-ಹೊರಗೆ ಒತ್ತಡದ ಜೀವನ ನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ವೇತನಸಹಿತ ಮುಟ್ಟಿನ ರಜೆ ನೀಡುವುದು ಸೂಕ್ತ. ಆರೋಗ್ಯ, ಕ್ಷಮತೆಯ ದೃಷ್ಟಿಯಿಂದಲೂ ಸಕಾರಾತ್ಮಕ ನಿರ್ಧಾರವಾಗಲಿದೆ.