ಪಹಲ್ಗಾಮ್ ಪ್ರಕರಣ; ಎನ್​ಐಎಗೆ ಹಸ್ತಾಂತರ

Pahalgam attack
Published on

ಪಹಲ್ಗಾಮ್ ನರಮೇಧದ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಗೆ ಹಸ್ತಾಂತರಿಸಲಾಗಿದ್ದು, ಎನ್​ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೋಯ್ಬಾ ಬೆಂಬಲಿತ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್​ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಕೌಂಟರ್ ಟೆರರಿಸಂ ಆಂಡ್ ಕೌಂಟರ್ ರ್ಯಾಡಿಕಲೈಸೇಷನ್ (ಸಿಟಿಸಿಆರ್) ವಿಭಾಗ ಈ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಎನ್​ಐಎಗೆ ಹಸ್ತಾಂತರಿಸಿದೆ. ಈ ಹಿನ್ನೆಲೆಯಲ್ಲಿ ಎನ್​ಐಎ ದಾಳಿ ನಡೆದ 4 ದಿನದ ಬಳಿಕ ಶನಿವಾರ ಹೊಸ ಎಫ್​ಐಆರ್ ದಾಖಲಿಸಿಕೊಂಡಿದೆ. ದಾಳಿ ನಡೆದ ಬಳಿಕ ಏಪ್ರಿಲ್ 23 ರಂದು ಡಿಜಿಪಿ ರ್ಯಾಂಕ್​ನ ಅಧಿಕಾರಿ ನೇತೃತ್ವದ ಎನ್​ಐಎ ತಂಡ ಬೈಸರನ್​ಗೆ ಭೇಟಿ ನೀಡಿತ್ತು. ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ತನಿಖೆ ಆರಂಭಿಸಿದೆ. ಎನ್​ಐಎ ಅಧಿಕಾರಿಗಳ ತಂಡ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಿ ಉಗ್ರರ ಕುರಿತು ವಿವರ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net