ಪಹಲ್ಗಾಮ್​ ಕದನ; ಜಮ್ಮು ವಿಮಾನ ನಿಲ್ದಾಣದ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ| Terror attack

jammu 5 mar 20
Published on

Terror attack| ಪಾಕಿಸ್ತಾನದ ಹಲವು ನಗರಗಳ ಮೇಲೆ ಭಾರತ ನಡೆಸುತ್ತಿರುವ ದಾಳಿಯಿಂದ ಪಾಕಿಸ್ತಾನ ಕೋಪಗೊಂಡಿದ್ದು, ಇದರಿಂದ ಭಾರತದ ಜಮ್ಮು ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗಿದೆ. ಪಾಕಿಸ್ತಾನ ಜಮ್ಮು ನಗರದ ಮೇಲೆ ಡ್ರೋನ್ ಅನ್ನು ಕಳುಹಿಸುತ್ತಿದ್ದು, S-400 ಡಿಫೆನ್ಸ್​ ಸಿಸ್ಟಮ್​ನಿಂದ ಪಾಕ್​ ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ.

ಡಿಫೆನ್ಸ್ ಕಾಲೋನಿ ಮತ್ತು ಜಮ್ಮು ವಿಮಾನ ನಿಲ್ದಾಣದ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ಭಾರತೀಯ ಸೇನೆಯು ಕೆಲವೇ ನಿಮಿಷಗಳಲ್ಲಿ ಪಾಕಿಸ್ತಾನದ ಡ್ರೋನ್​ ಸಂಚನ್ನು ವಿಫಲಗೊಳಿಸಿದೆ.

ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್​ಅನ್ನು ಪ್ರಾರಂಭಿಸುವ ಮೂಲಕ ಬಲವಾಗಿ ಪ್ರತಿಕ್ರಿಯಿಸಿದೆ. ಇದಾದ ಬಳಿಕ ಚದುರಿಹೋದ ಪಾಕಿಸ್ತಾನವು ಗಡಿಯಾಚೆಯಿಂದ ಹಲವಾರು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ 16 ಭಾರತೀಯ ನಾಗರಿಕರನ್ನು ಕೊಂದಿತು. ಅವರು ಭಾರತದ ನಾಲ್ಕು ರಾಜ್ಯಗಳ 15 ನಗರಗಳ ಮೇಲೆ ದಾಳಿ ಮಾಡಲು ಸಹ ಯೋಜಿಸಿದ್ದರು.

ಇನ್ನೂ ಪಾಕ್​ ವಿರುದ್ಧದ ದಾಳಿಗೆ ಭಾರತದ ಜೆಟ್​ಗಳು ಮುಂದಾಗಿದ್ದು, ಜಮ್ಮು ವಿವಿಯ ಬಳಿ ಪಾಕಿಸ್ತಾನದ 8 ಡ್ರೋನ್​ಗಳನ್ನು ಹೊಡೆದುರುಳಿಸಲಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net