ಪಹಲ್ಗಾಮ್​ ದಾಳಿಯ ಮಾಸ್ಟರ್​ಮೈಂಡ್​ 'ಸೈಫುಲ್ಲಾ ಕಸೂರಿ' ಲಾಹೋರ್​ನಲ್ಲಿ ಪ್ರತ್ಯಕ್ಷ! | Pahalgam Attack

dk - 2025-05-29T164859.015
Published on

Pahalgam Attack: ಜಮ್ಮು-ಕಾಶ್ಮೀರದ ಪಹಲ್ಗಾಮ್​​ನಲ್ಲಿ ಏ.22ರಂದು 26 ಭಾರತೀಯ ನಾಗರಿಕನ್ನು ಕೊಲೆಗೈದ ಭಯೋತ್ಪಾದಕರ ದಾಳಿಯ ಮಾಸ್ಟರ್​ಮೈಂಡ್​ ಹಾಗೂ ಲಷ್ಕರ್​ ಎ-ತೊಯ್ಬಾ ಕಮಾಂಡರ್​ ಸೈಫುಲ್ಲಾ ಕಸೂರಿ ಪಾಕ್​ನ ಲಹೋರ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ಗುರುವಾರ ವರದಿ ಮಾಡಿದೆ.

ಪಾಕಿಸ್ತಾನ ಮುಖರ್ಜಿ ಮುಸ್ಲಿಂ ಲೀಗ್​(ಪಿಎಂಎಂಎಲ್​) ಆಯೋಜಿಸಿದ್ದ ರ್ಯಾಲಿಯಲ್ಲಿ ಈ ಸೈಫುಲ್ಲಾ ಕಸೂರಿ ಮತ್ತು ಎಲ್​ಇಟಿ ಸಂಸ್ಥಾಪಕ ಮತ್ತು ವಿಶ್ವಸಂಸ್ಥೆ ಗುರುತಿಸಿದ ಮೊಸ್ಟ್​ ವಾಂಟೆಡ್​ ಟೆರರಿಸ್ಟ್​​ ಹಫೀಜ್​ ಸಯೀದ್​ ಪುತ್ರ ತಲ್ಹಾ ಸಹೀದ್​ ಕೂಡ ಕಾಣಿಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಪಾಕಿಸ್ತಾದನದ ಲಾಹೋರ್​ನಲ್ಲಿ ಸೈಫುಲ್ಲಾ ಕಸೂರಿ ಕಾಣಿಸಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಅಲ್ಲದೆ, ಭಾರತ ವಿರೋಧಿ ಮತ್ತು ಜಿಹಾದಿ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ಸೆರೆಯಾಗಿವೆ.

"ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ನನ್ನನ್ನು ದೂಷಿಸಲಾಯಿತು. ಈಗ ನನ್ನ ಹೆಸರು ಇಡೀ ದೇಶದಲ್ಲಿ ಪ್ರಸಿದ್ಧವಾಗಿದೆ" ಎಂದು ಕಸೂರಿ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ರ್ಯಾಲಿಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.

ಪಹಲ್ಗಾಮ್​ ದಾಳಿಯನ್ನು ಭಯೋತ್ಪಾದಕ ಕಸೂರಿಯ ಮಾಸ್ಟರ್​ಮೈಂಡ್​ ಎಂದು ಗುರುತಿಸಲಾಗಿದೆ. ಭಾರತ ಸರ್ಕಾರವು ಈ ದಾಳಿಯನ್ನು ಎಲ್ಇಟಿಯ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್​ನ ಭಯೋತ್ಪಾದಕರು ನಡೆಸಿದೆ ಎಂದಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net