ದ್ವಾರಕಾಗೆ 141 ಕಿ.ಮೀ ಪಾದಯಾತ್ರೆ ಆರಂಭಿಸಿದ ಅನಂತ್ ಅಂಬಾನಿ! ಕಾರಣ ಏನು ಗೊತ್ತಾ?Ananth ambani

Anant Ambani
Published on

Ananth ambani | ದೇಶದ ಅತಿ ದೊಡ್ಡ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅನಂತ್​ ಅಂಬಾನಿಯ 140 ಕಿಲೋ ಮೀಟರ್​ ಕಾಲ್ನಡಿಗೆಯಲ್ಲಿ ದ್ವಾರಕೆಗೆ ನಡೆದುಕೊಂಡು ಹೋಗ್ತಾ ಇದ್ದು, ಇದರ ಕೆಲ ವಿಡೀಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡ್ತಿವೆ.

ದ್ವಾರಕೆಗೆ ಹೋಗಲೆಂದು ಅನಂತ್ ಅಂಬಾನಿ ಪ್ರತಿದಿನ 20 ಕಿಲೋಮೀಟರ್ ನಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಕಟ್ಟುನಿಟ್ಟಿನ ಸೂಕ್ತ ಭದ್ರತಾ ವ್ಯವಸ್ಥೆಯೊಂದಿಗೆ ಅನಂತ್​ ಅಂಬಾನಿ ಕಾಲ್ನಡಿಗೆ ಆರಂಭಿಸಿದ್ದು, ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಸಾರ್ವಜನಿಕರಿಗೆ ಯಾವುದೇ ಅನಾನುಕೂಲ ಉಂಟಾಗಬಾರದೆಂದು ಅವರು ರಾತ್ರಿಯಲ್ಲಿ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.

ಅನಂತ್ ಅಂಬಾನಿ ದ್ವಾರಕೆಗೆ ಹೋಗುತ್ತಿರುವುದೇಕೆ?

ಇನ್ನೂ ಇಷ್ಟು ಶ್ರೀಮಂತ ವ್ಯಕ್ತಿ ಕಾಲ್ನಡಿಗೆಯಲ್ಲಿ ದ್ವಾರಕೆಗೆ ಹೋಗುತ್ತಿರುವುದೇಕೆ ಎಂಬುದು ಅನೇಕರ ಪ್ರಶ್ನೆಯಾಗಿದೆ. ಅನಂತ್ ಅಂಬಾನಿ ಮೂಲತಃ ಧಾರ್ಮಿಕರಾಗಿದ್ದು, ಅನಂತ್ ಅಂಬಾನಿಗೆ ಅವರ ತಾಯಿ ಮತ್ತು ತಂದೆಯಂತೆ ದೇವರಲ್ಲಿ ಅಪಾರ ನಂಬಿಕೆ ಇದೆ ಎನ್ನಲಾಗಿದೆ. ಇದಕ್ಕೂ ಮೊದಲು, ಅನಂತ್ ತಮ್ಮ ಕುಟುಂಬದೊಂದಿಗೆ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಲಾದ ಮಹಾಕುಂಭದಲ್ಲಿ ಭಾಗವಹಿಸಿದ್ದರು. ಅಲ್ಲಿ ಅನಂತ್ ಅಂಬಾನಿ ಅವರು ತಮ್ಮ ಇಡೀ ಕುಟುಂಬದೊಂದಿಗೆ ಭಕ್ತಿಯಿಂದ ಮಹಾಕುಂಬಮೇಳದಲ್ಲಿ ಪೂಜೆ ಸಲ್ಲಿಸಿದ್ದರು. ಇದೀಗ ಏಪ್ರಿಲ್ 10 ರಂದು ಅನಂತ್ ಅಂಬಾನಿ ಅವರ ಹುಟ್ಟುಹಬ್ಬವಿದೆ ಎನ್ನಲಾಗಿದೆ. ಹಾಗಾಗಿ ಅವರು ದ್ವಾರಕಾ ದೇವಸ್ಥಾನದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ.

141 ಕಿ.ಮೀ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರಾ?

ಅನಂತ್ ಅಂಬಾನಿಯವರ ಕೆಲವು ವೀಡಿಯೊಗಳು ವೈರಲ್ ಆಗುತ್ತಿವೆ. ಇದರಲ್ಲಿ ಅನಂತ್ ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಈ ವಿಡಿಯೋದಲ್ಲಿ ಅನಂತ್ ಅಂಬಾನಿ ಜಾಮ್‌ನಗರದಿಂದ ದ್ವಾರಕಾಗೆ ನಡೆದುಕೊಂಡು ಹೋಗುತ್ತಿದ್ದಾರೆ.  ಅನಂತ್ ಅಂಬಾನಿ ಸುಮಾರು 140 ಕಿ.ಮೀ ನಡೆದು ದ್ವಾರಕೆ ತಲುಪಿ ಅಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಪ್ರತಿದಿನ 15 ರಿಂದ 20 ಕಿ.ಮೀ ಪ್ರಯಾಣಿಸಿದರೆ ಈ ಪ್ರಯಾಣವು ಸುಮಾರು 12 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net