2021ರ ಪದ್ಮ ಪ್ರಶಸ್ತಿ ಪ್ರಕಟ: ಡಾ. ಬಿ.ಎಂ. ಹೆಗ್ಡೆ, ಚಂದ್ರಶೇಖರ ಕಂಬಾರ ಸೇರಿ ಐವರು ಕನ್ನಡಿಗರಿಗೆ ಗೌರವ

Padma Award
Published on

ಬೆಂಗಳೂರು: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದ್ದು, ಡಾ. ಬಿ.ಎಂ. ಹೆಗ್ಡೆ ಸೇರಿದಂತೆ ಕರ್ನಾಟಕದ ಐವರು ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಬಿ.ಎಂ. ಹೆಗ್ಡೆ ಅವರಿಗೆ ಪದ್ಮವಿಭೂಷಣ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಮತಾ ಬಿ. ಮಂಜಮ್ಮ (ಕಲೆ), ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್​ (ಸಾಹಿತ್ಯ ಮತ್ತು ಶಿಕ್ಷಣ) ಮತ್ತು ಕೆ.ವೈ. ವೆಂಕಟೇಶ್​ (ಕ್ರೀಡೆ) ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ.

ಒಟ್ಟಾರೆ ವಿವಿಧ ಕ್ಷೇತ್ರದ 102 ಗಣ್ಯರಿಗೆ "ಪದ್ಮಶ್ರೀ" ಪ್ರಶಸ್ತಿ, 10 ಗಣ್ಯರಿಗೆ "ಪದ್ಮಭೂಷಣ" ಮತ್ತು 7 ಗಣ್ಯರಿಗೆ "ಪದ್ಮವಿಭೂಷಣ" ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net