

ಹುಣಸೂರು: ರಾಜ್ಯದ ರಾಜ್ಯಪಾಲರನ್ನು ಬಿಜೆಪಿ, ಜೆಡಿಎಸ್ ನಾಯಕರು ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಪಾದಯಾತ್ರೆ ಮೂಲಕ ಸಂಚು ರೂಪಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಆ.9ರಂದು ಆಯೋಜನೆಗೊಂಡಿರುವ ಜನಾಂದೋಲನ ಸಮಾವೇಶದ ಕುರಿತಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಯಾವುದೇ ಪಕ್ಷದ ಏಜೆಂಟರಲ್ಲ. ಅವರದ್ದು ಇಡೀ ರಾಜ್ಯವನ್ನ ಪಾಲನೆ ಮಾಡಬೇಕಾದ ಜವಾಬ್ದಾರಿಯುತ ಸಾಂವಿಧಾನಿಕ ಹುದ್ದೆ. ವಿರೋಧ ಪಕ್ಷಗಳ ಪರವಾಗಿ ಕೆಲಸ ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ ಹಿಂದುಳಿದ ವರ್ಗದ ಮುಖ್ಯಮಂತ್ರಿಗೆ ತೊಂದರೆ ಕೊಡಲು ದಲಿತ ಅಲ್ಪಸಂಖ್ಯಾತರಿಗೆ ಅವಮಾನ ಮಾಡಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಉಂಟಾಗುವ ಅಶಾಂತಿಗೆ ಬಿಜೆಪಿ, ಜೆಡಿಎಸ್ ನಾಯಕರೇ ಕಾರಣರಾಗುತ್ತಾರೆ. ಆ.9 ರಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಅಡಳಿತವನ್ನು ಬೆಂಬಲಿಸಿ ಆಯೋಜಿಸಿರುವ ಜನಾಂದೋಲನ ಸಮಾವೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಿ.ನಾರಾಯಣ್. ಕಲ್ಕುಣಿಕೆ ರಮೇಶ್, ಬಿಳಿಕೆರೆ ಪ್ರೇಮ್ ಕುಮಾರ್, ಕಾರ್ಯಾಧ್ಯಕ್ಷ ವಕೀಲ ಪುಟ್ಟರಾಜ್, ಬಸವರಾಜಪ್ಪ, ಮುಖಂಡ ಕುನ್ನೇಗೌಡ, ಎ.ಪಿ.ಸ್ವಾಮಿ, ಜಯರಾಮ್, ಬಿಳಿಕೆರೆ ಬಸವರಾಜ್, ಎಚ್.ಪಿ. ಅಮರನಾಥ್, ಅಣ್ಣಯ್ಯನಾಯ್ಕ, ಹುಂಡಿಮಾಳ ಸುರೇಶ್, ಬಸವರಾಜಗೌಡ, ರಾಜು ಶಿವರಾಜೇಗೌಡ, ಟಿ.ಕೃಷ್ಣ, ಅಜ್ಗರ್ ಪಾಶ, ಸ್ವಾಮಿಗೌಡ, ಶಾಂತ ರಮೇಶ್, ನೇತ್ರಾವತಿ, ರೇಖಾಮಣಿ, ಕಲ್ಪನ, ಜಯಲಕ್ಷ್ಮೀ, ಕುಮಾರ್, ರಾಘು, ಚಿಕ್ಕ ಸ್ವಾಮಿ, ಲೋಕೇಶ್, ಸಂತೋಷ್, ವೆನ್ನಿ ಇತರರು ಇದ್ದರು.