ಪಾದರಾಯನಪುರ ಗಲಭೆ ಪ್ರಮುಖ ಆರೋಪಿ ಕೆಎಫ್​ಡಿ ಇರ್ಫಾನ್​ ಸೆರೆ

ifran padarayana pura
Published on

ಬೆಂಗಳೂರು: ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಪಾದರಾಯನಪುರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಎಫ್​ಡಿ ಇರ್ಫಾನ್​ ಬಂಧಿತ ಆರೋಪಿ. ಈತ ಘಟನೆ ನಂತರ ತಲೆ ಮರೆಸಿಕೊಂಡಿದ್ದ. ಗಲಭೆಯಲ್ಲಿ ಇರ್ಫಾನ್​ ಪ್ರಮುಖ ಪಾತ್ರ ವಹಿಸಿದ್ದ ಎಂಬುದನ್ನು ಪತ್ತೆ ಮಾಡಿದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು.
ಗಲಭೆ ನಡೆದ ನಂತರ ಈತ ನಗರದಲ್ಲೇ ತಲೆ ಮರೆಸಿಕೊಂಡಿದ್ದ. ಇರ್ಫಾನ್​ ಅಡಗಿರುವ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕರೊನಾ ಹಾವಳಿ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ಪಾದರಾಯನಪುರವನ್ನು ಸೀಲ್​ಡೌನ್​ ಮಾಡುವಂತೆ ಸೂಚನೆ ನೀಡಿದ್ದರು. ಈ ಅವಧಿಯಲ್ಲಿ ಪಾದರಾಯನಪುರದಲ್ಲಿ ಅಡಗಿದ್ದ ಸೋಂಕಿತರನ್ನು ಕ್ವಾರಂಟೈನ್​ಗೆ ಅಳವಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಪೊಲೀಸರ ನೆರವಿನೊಂದಿ ಏ.19ರ ಭಾನುವಾರ ಮಧ್ಯರಾತ್ರಿ ಮುಂದಾಗಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನೂರಾರು ಮಂದಿ ಬೀದಿಗಿಳಿದು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಬ್ಯಾರಿಕೇಡ್​ಗಳನ್ನು ಧ್ವಂಸಗೊಳಿಸಿದ್ದರು.

ಪ್ರಕರಣ ಸಂಬಂಧ ಪೊಲೀಸರು ಮಹಿಳೆ ಸೇರಿದಂತೆ 121 ಮಂದಿಯನ್ನು ಬಂಧಿಸಿದ್ದರು. ಇವರಲ್ಲಿ 5 ಮಂದಿಗೆ ಕರೊನಾ ಸೋಂಕು ಹರಡಿರುವುದು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net