ಸೇಫ್ ರೂಮ್​​ ರಹಸ್ಯ!: 100ಕ್ಕೂ ಹೆಚ್ಚು ಚಿನ್ನದ ಪ್ಯಾಕೆಟ್​ಗಳು ಎಸ್​ಬಿಐ ಶಾಖೆಯಿಂದ ನಿಗೂಢವಾಗಿ ನಾಪತ್ತೆ!

Gold Theft
Published on

ಶ್ಯೋಪುರ(ಮಧ್ಯಪ್ರದೇಶ): ಸೇಫ್ ರೂಮ್​​ನಲ್ಲಿರಿಸಿದ್ದೂ ನಾಪತ್ತೆಯಾಗುತ್ತ? ಆಗಿದೆ ಎಂದು ದೂರು ನೀಡಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಸೇಫ್ ರೂಮ್​​ನಲ್ಲಿ ಇರಿಸಿದ್ದ 100ಕ್ಕೂ ಹೆಚ್ಚು ಚಿನ್ನದ ಪ್ಯಾಕೆಟ್​ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ನಾಪತ್ತೆಯಾಗಿದೆ. ಹೀಗೊಂದು ದೂರು ಮಧ್ಯಪ್ರದೇಶದ ಶ್ಯೋಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸ್ವಲ್ಪ ವಿಚಿತ್ರವೆನಿಸುವ ಈ ನಾಪತ್ತೆ ಪ್ರಕರಣ, ಶ್ಯೋಪುರದ ಸ್ಟೇಷನ್ ರಸ್ತೆಯಲ್ಲಿರುವ ಎಸ್​ಬಿಐ ಶಾಖೆಯಲ್ಲಿ ನಡೆದಿದೆ. ಸೇಫ್ ರೂಮ್​ನ ಈ ರಹಸ್ಯವನ್ನು ಪತ್ತೆಹಚ್ಚುವ ಹೊಣೆ ಈಗ ಕೊತ್ವಾಲಿ ಠಾಣೆಯ ಪೊಲೀಸರ ಹೆಗಲೇರಿದೆ.

ಬ್ಯಾಂಕ್ ಕೊಟ್ಟಿರುವ ದೂರಿನ ಪ್ರಕಾರ, ಗ್ರಾಹಕರು ಅಡ ಇಟ್ಟ ಚಿನ್ನದ ಆಭರಣಗಳಿದ್ದ 101 ಪ್ಯಾಕೆಟ್​ಗಳನ್ನು ಇಟ್ಟ ಸೇಫ್​ ರೂಮ್​ ನ ಒರಿಜನಲ್ ಕೀ ನಾಪತ್ತೆಯಾದ ಕಾರಣ ಡುಪ್ಲಿಕೇಟ್​ ಕೀ ಮೂಲಕ ಬ್ಯಾಂಕ್ ಸೇರ್ಫ ಅನ್ನು ತೆರೆಯಲಾಗಿತ್ತು. ಆಗ ಈ ಆಭರಣಗಳ ಪ್ಯಾಕೆಟ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ಎಸ್​ಪಿ ಸಂಪತ್ ಉಪಾಧ್ಯಾಯ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಬ್ಯಾಂಕ್ ಅಧಿಕಾರಿಗಳನ್ನೆ ಆರೋಪಿಗಳನ್ನಾಗಿ ಮಾಡಲಾಗಿದೆ. ನಾಪತ್ತೆಯಾಗಿರುವ ಚಿನ್ನದ ಆಭರಣಗಳೆಷ್ಟು ಮತ್ತು ಅವುಗಳ ಮೌಲ್ಯ ಎಷ್ಟೆಂಬುದನ್ನು ಇನ್ನೂ ಖಚಿತಪಡಿಸಲಾಗಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net