ದೇಣಿಗೆಯಾಗಿ ಚೀನಾದಿಂದ ಬಂದವು ಪಿಪಿಇ, ಒಟ್ಟು 50 ಸಾವಿರ ಪಿಪಿಇಗಳ ಗುಣಮಟ್ಟ ಕಳಪೆ

ppe
Published on

ನವದೆಹಲಿ: ಕರೊನಾ ವಾರಿಯರ್ಸ್​ಗೆಂದು ದೊಡ್ಡ, ದೊಡ್ಡ ಕಂಪನಿಗಳು ಚೀನಾದಿಂದ ತರಿಸಿಕೊಟ್ಟಿದ್ದ 50 ಸಾವಿರ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು (ಪಿಪಿಇ) ವೈದ್ಯರು ತಿರಸ್ಕರಿಸಿದ್ದಾರೆ. ಇವುಗಳು ಗುಣಮಟ್ಟ ಕಳಪೆಯಾಗಿದೆ ಎಂಬ ಕಾರಣಕ್ಕಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿನ ದೊಡ್ಡ, ದೊಡ್ಡ ಕಂಪನಿಗಳು ಕರೊನಾ ವಾರಿಯರ್ಸ್​ಗಾಗಿ ಕೇಂದ್ರ ಸರ್ಕಾರಕ್ಕೆ ಒಟ್ಟು 1.7 ಲಕ್ಷ ಪಿಪಿಇಗಳನ್ನು ದೇಣಿಗೆಯಾಗಿ ಕೊಟ್ಟಿದ್ದರು. ಏಪ್ರಿಲ್​ 5ರಂದು ಇವು ಭಾರತವನ್ನು ತಲುಪಿದ್ದವು.
ಇವುಗಳನ್ನು ಗ್ವಾಲಿಯರ್​ನಲ್ಲಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಯೋಗಾಲಯದಲ್ಲಿ (ಡಿಆರ್​ಡಿಒ) ಪರಿಶೀಲಿಸಿದಾಗ

ಒಟ್ಟು 50 ಸಾವಿರ ಪಿಪಿಇಗಳ ಗುಣಮಟ್ಟ ಕಳಪೆಯಾಗಿರುವುದು ಖಚಿತಪಟ್ಟಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಸಿಇ/ಎಫ್​ಡಿಎ ಅನುಮೋದಿಸಿ, ಮುದ್ರೆಯೊತ್ತಿರುವ ಪಿಪಿಇಗಳನ್ನೇ ತರಿಸುತ್ತಿರುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಇದೀಗ ಪರೀಕ್ಷೆಗೆ ಒಳಪಡಿಸಿರುವ ದಾಸ್ತಾನು ದೇಣಿಗೆ ರೂಪದಲ್ಲಿ ಚೀನಾದಿಂದ ಬಂದಿದ್ದರು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net