21ಸಾವಿರವನ್ನೂ ಮೀರಿತು ರಾಜ್ಯದ ಕರೊನಾ ಸೋಂಕಿತರ ಸಂಖ್ಯೆ; ಬೆಂಗಳೂರಲ್ಲಿ ಇಂದು ಸಾವಿರಕ್ಕೂ ಹೆಚ್ಚು ಕೇಸ್​

Covid 19
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 1839 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 1,172 ಕೇಸ್​ಗಳು ಬೆಂಗಳೂರಿನಲ್ಲಿಯೇ ದೃಢಪಟ್ಟಿದ್ದು, ರಾಜಧಾನಿ ಅಪಾಯದತ್ತ ದಾಪುಗಾಲು ಇಡುತ್ತಿದೆ. ಅಷ್ಟೇ ಅಲ್ಲ ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿಯೇ 24 ಸೋಂಕಿತರು ಸಾವನ್ನಪ್ಪಿದ್ದಾರೆ.

ಇಂದು 449 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 42 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 21,549ಕ್ಕೆ ಏರಿದ್ದು, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದವರು 9244 ಮಂದಿ. ಮೃತಪಟ್ಟವರ ಸಂಖ್ಯೆ 335 ಮತ್ತು ಸಕ್ರಿಯ ಕರೊನಾ ಪ್ರಕರಣಗಳು 11,966.

ಇಂದು ಯಾವ ಜಿಲ್ಲೆಗಳಲ್ಲಿ ಎಷ್ಟು ಕರೊನಾ ಕೇಸ್​​ಗಳು ಪತ್ತೆಯಾಗಿವೆ? ಪಟ್ಟಿ ಇಲ್ಲಿದೆ:

ಬೆಂಗಳೂರು ನಗರ-1172

ದಕ್ಷಿಣ ಕನ್ನಡ-75

ಬಳ್ಳಾರಿ-73

ಬೀದರ್​-51

ಧಾರವಾಡ-45

ರಾಯಚೂರು-41

ಮೈಸೂರು-38

ಕಲಬುರಗಿ, ವಿಜಯಪುರ-ತಲಾ 37

ಮಂಡ್ಯ, ಉತ್ತರಕನ್ನಡ-ತಲಾ 35

ಶಿವಮೊಗ್ಗ-31

ಹಾವೇರಿ-28

ಬೆಳಗಾವಿ-27

ಹಾಸನ-25

ಉಡುಪಿ-18

ಚಿಕ್ಕಬಳ್ಳಾಪುರ, ತುಮಕೂರು-ತಲಾ 12

ಬೆಂಗಳೂರು ಗ್ರಾಮಾಂತರ, ಕೋಲಾರ-ತಲಾ 11

ದಾವಣಗೆರೆ-7

ಚಾಮರಾಜನಗರ -5

ಗದಗ-4

ಕೊಪ್ಪಳ, ಚಿಕ್ಕಮಗಳೂರು-ತಲಾ 3

ರಾಮನಗರ-2

ಯಾದಗಿರಿ-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net