ಮಸ್ಕತ್​ನಲ್ಲಿ 120ಕ್ಕೂ ಅಧಿಕ ಮಕ್ಕಳಿಂದ ಕನ್ನಡ ಪರೀಕ್ಷೆ ಯಶಸ್ವಿ

maskat
Published on

ಹುಬ್ಬಳ್ಳಿ: ಕರ್ನಾಟಕ ಸಂಘ ಮಸ್ಕತ್​ನ ಕನ್ನಡ ಶಾಲೆಯ 2024-2025 ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆ ಮೇ 2ರಂದು ಯಶಸ್ವಿಯಾಗಿ ನಡೆಯಿತು.

ಮಸ್ಕತ್ತಿನ ಅಲ್ ಘುಬ್ರ ಆರ್ಟ್ ಲಿವಿಂಗ್ ಪ್ರೖೆವೇಟ್ ಸ್ಕೂಲ್​ನಲ್ಲಿ ನಡೆದ ಶೈಕ್ಷಣಿಕ ವರ್ಷದ (2024-25) ವಾರ್ಷಿಕ ಪರೀಕ್ಷೆಯಲ್ಲಿ ಮಸ್ಕತ್ ಕನ್ನಡ ಶಾಲೆಯ ಒಂದರಿಂದ ಐದನೇ ತರಗತಿಯ ಸುಮಾರು 120ಕ್ಕೂ ಅಧಿಕ ಮಕ್ಕಳು ಪರೀಕ್ಷೆ ಬರೆದಿದ್ದಾರೆ.

ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಪ್ರಸಕ್ತ ಒಂಬತ್ತು ಸ್ವಯಂ ಸೇವಕ ಶಿಕ್ಷಕಿಯರು ವಾರಾಂತ್ಯದಲ್ಲಿ ತರಗತಿಗಳ ಮೂಲಕ ವಿದೇಶದಲ್ಲಿ ಬೆಳೆಯುತ್ತಿರುವ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ಇಲ್ಲಿ ಕನ್ನಡ ಕಲಿತ ಮಕ್ಕಳು ಭಾರತಕ್ಕೆ ಮರಳಿ ಉನ್ನತ ವ್ಯಾಸಂಗ ಮಾಡಿ ಕನ್ನಡವನ್ನು ಅನ್ಯ ಭಾಷಿಗರಿಗೂ ಕಲಿಸುವ ಉತ್ಸಾಹ ತೋರಿರುವುದು ಹೆಗ್ಗಳಿಕೆ.

ಮಕ್ಕಳಿಗೆ ವರ್ಷದುದ್ದಕ್ಕೂ ಕನ್ನಡ ಓದಲು ಹಾಗೂ ಬರೆಯಲು ಕಲಿಸಿಕೊಟ್ಟು ಪರೀಕ್ಷೆ ಬರೆಯಲು ಶ್ರಮಿಸಿದ ಎಲ್ಲ ಶಿಕ್ಷಕಿಯರಿಗೂ ಕರ್ನಾಟಕ ಸಂಘ ಮಸ್ಕತ್​ನ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net