ನಮ್ಮದು ಪ್ರಜ್ಞಾವಂತ, ರೋಗಗ್ರಸ್ತ ಸಮಾಜ: ಆಯನೂರು ಮಂಜುನಾಥ್

ex mlc ayanur manju
ಮಾಜಿ ಎಂಎಲ್ ಸಿ ಆಯನೂರು ಮಂಜುನಾಥ್
Published on

ಶಿವಮೊಗ್ಗ: ವೀರಶೈವ ಲಿಂಗಾಯತ ಪ್ರಜ್ಞಾವಂತ ಸಮಾಜ. ಅದೇ ರೀತಿ ರೋಗಗ್ರಸ್ತ ಸಮಾಜ ಕೂಡ ಆಗಿದೆ. ಅದರಿಂದ ಹೊರಬಂದರೆ ಮಾತ್ರ ದೇಶವನ್ನೇ ಆಳಬಹುದು ಎಂದು ಮಾಜಿ ಎಂಎಲ್ ಸಿ ಆಯನೂರು ಮಂಜುನಾಥ್ ಹೇಳಿದರು.

ನಗರದ ಚೌಕಿ ಮಠದ ಆವರಣದಲ್ಲಿ ಶುಕ್ರವಾರ ಶಿವಮೊಗ್ಗ ವೀರಶೈವ ಲಿಂಗಾಯಿತ ಸಂಘಟನಾ ವೇದಿಕೆಯಿಂದ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಇಂದು ವೀರಭದ್ರ ಮತ್ತೊಮ್ಮೆ ಅವತಾರ ಎತ್ತುವ ಅನಿರ್ವಾಯತೆ ಇದೆ. ಸಮಾಜದೊಳಗೆ ಹಲವು ರೀತಿಯ ಪ್ರಶ್ನೆಗಳು ಉದ್ಬವವಾಗಿವೆ. ಒಂದೊಂದು ಸಭೆಯಲ್ಲಿ ಒಂದೊಂದು ನಿರ್ಣಯಗಳ ಮಂಡನೆ ಆಗುತ್ತಿವೆ. ಹಿಂದುಳಿಯುವ ಪ್ರಯತ್ನ ನಡೆಯುತ್ತಿದೆ. ಕೆಲವರು 2ಎ ಮೀಸಲಾತಿ ಕೇಳುತ್ತಿದ್ದಾರೆ. ಅದಕ್ಕೆ ಸ್ವಾಮೀಜಿಗಳೂ ಅವರ ಬೆನ್ನ ಹಿಂದಿದ್ದಾರೆ. ಇದು ಜಿಜ್ಞಾಸೆ ಮೂಡುತ್ತಿದೆ ಎಂದರು.
ಸಮಾಜದ ಶ್ರದ್ಧಾಭಂಗ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಶ್ರದ್ಧಾ ಕೇಂದ್ರಗಳ ಭಂಗ ಆಗಬಾರದು. ಇದು ದೊಡ್ಡ ಸಮಾಜವಾಗಿದ್ದು ನಡೆಸುವಾಗ ಸಣ್ಣಪುಟ್ಟ ಕೋರೆ, ದೋಷಗಳಿರಬಹುದು. ಆ ರಂಧ್ರಗಳನ್ನು ಮುಚ್ಚುವ ಕೆಲಸ ಆಗಬೇಕಿದೆ. ಮಠಾಧೀಶರನ್ನೇ ಪ್ರಶ್ನಿಸುವ ಸ್ಥಿತಿ ಬಂದಿದೆ. ಇಡೀ ಸಮಾಜ ಒಟ್ಟಾಗಿ ಮೇಲೇಳದಿದ್ದರೆ ವೀರಭದ್ರನ ಹೆಸರೇಳಲು ನಾವು ಯೋಗ್ಯರೇ ಅಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net