ಉಪಪಂಗಡ ಒಟ್ಟಾದಾಗ ನಮ್ಮ ಸಂಖ್ಯೆ ಗೊತ್ತಾಗಲಿದೆ; ಎಂ.ಬಿ.ಪಾಟೀಲ್ ಹೇಳಿಕೆ

m b patil speak about siddaramih
Published on

ಬೆಂಗಳೂರು: ಜಾತಿ ಗಣತಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಯಾವ ಜಾತಿಗಳಿಗೂ ಅನ್ಯಾಯ ಆಗಬಾರದು. ಸಿಎಂ ಬಳಿ ಈಗಾಗಲೇ ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ವೀರಶೈವ ಮಹಾಸಭಾ ಸೇರಿದಂತೆ ಕೆಲವರು ಸಮುದಾಯಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದೇ ವೇಳೆ ಪತ್ರಿಕೆಯಲ್ಲಿ ಜಾತಿಜನಗಣತಿ ವರದಿ ಲೀಕ್ ಆಗಿದೆ ಅಂತ ಸುದ್ದಿ ನೋಡಿದೆ. ಲಿಂಗಾಯತ ವಿಚಾರ ಬಂದಾಗ 55 ಲಕ್ಷ ಎಂದು ಪತ್ರಿಕೆಯಲ್ಲಿ ಹಾಕಿದ್ದಾರೆ. ಅನೇಕ ಲಿಂಗಾಯತ ಉಪಪಂಗಡಗಳು ಇವೆ. 108 ಲಿಂಗಾಯತ ಉಪ ಪಂಗಡಗಳಿವೆ, ಅವರನ್ನ ಗಣನೆಗೆ ತೆಗೆದುಕೊಳ್ಳದಿದ್ದರೆ ನಮ್ಮ ಜನಸಂಖ್ಯೆ ಕಡಿಮೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಜನಸಂಖ್ಯೆ ರಾಜ್ಯದಲ್ಲಿ ಶೇ.17ಕ್ಕಿಂತ ಹೆಚ್ಚಾಗಿದೆ. ಎಲ್ಲ ಲಿಂಗಾಯತ ಉಪ ಪಂಗಡಗಳನ್ನು  ಒಂದೇ ಅಡಿಗೆ ತೆಗೆದುಕೊಂಡು ಬರಬೇಕು. ವರದಿ ಬಂದು ಬಳಿಕ ಸತ್ಯಾಂಶ ಗೊತ್ತಾಗುತ್ತದೆ ಎಂದರು.

ಲಿಂಗಾಯತ ಗಾಣಿಗ, ಲಿಂಗಾಯತ ಬಣಜಿಗ, ಲಿಂಗಾಯತ ಸಾಧು ಏನೇ ಬರೆಸಿರಲಿ ಅವರನ್ನೆಲ್ಲ ಲಿಂಗಾಯತ ಅಂತ ಪರಿಗಣನೆ ಮಾಡಬೇಕಾಗುತ್ತದೆ. ಆಗ ನಮ್ಮ ಜನಸಂಖ್ಯೆ ಗೊತ್ತಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net