ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ; ಡಿ.ಕೆ.ಶಿವಕುಮಾರ್ ತಿರುಗೇಟು

dk
Published on

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಏಕನಾಥ ಶಿಂಧೆಯವರ ಅವರ ಸರ್ಕಾರ ಇರುವುದೇ ಅನುಮಾನ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.

ಮಹಾರಾಷ್ಟ್ರ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಪ್ರಚಾರ ಸಭೆಯಲ್ಲಿ ಮೋದಿ ಸಾಹೇಬರು ಉದ್ಧವ ಠಾಕ್ರೆ ಬಗ್ಗೆ ಯಾಕೆ ಮಾತನಾಡಿದರು. ಅವರ ಬಳಿ ಶಕ್ತಿ ಇದೆ ಎಂದು ಮಾತನಾಡಿದ್ದಾರೆ. ಲೋಕಸಭೆ ಚುನಾವಣೆ ಬಳಿಕ, ಎನ್‌ಸಿಪಿ, ಶಿವಸೇನೆ ಶಾಸಕರು ಅವರವರ ಪಕ್ಷಕ್ಕೆ ಮರಳುತ್ತಾರೆ, ಅಲ್ಲಿ ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಶಿಂಧೆ ಮಾಡಲ್ ಆಗಬಹುದೇ, ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ ಶಿಂಧೆಯಂತಹವರು ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ಅಂತಹ ಯಾವ ಬೆಳವಣಿಗೆ ನಡೆಯಲ್ಲ. ನಮಗೆ ಯಾವುದೇ ಭಯವೂ ಇಲ್ಲ. ಅಲ್ಲಿ, ಮಹಾರಾಷ್ಟ್ರ ಸರ್ಕಾರ ಪತನವಾಗಿ ನಮ್ಮ ಸರ್ಕಾರ ಬರಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net