ವಿನೂತನ ನಮ್ಮ ಫ್ಲಿಕ್ಸ್​​

-68de7a638a88f
Published on

ಬೆಂಗಳೂರು: ಕನ್ನಡ ಕಂಟೆಂಟ್ ಸಿನಿಮಾಗಳಿಗಾಗಿಯೇ ಆರಂಭವಾಗಿರುವ ಕನ್ನಡದ ಏಕೈಕ ಓಟಿಟಿ ವೇದಿಕೆ ‘ನಮ್ಮ ಫ್ಲಿಕ್ಸ್’. 2020ರ ಏ. 24ರ ಡಾ.ರಾಜಕುಮಾರ್ ಜಯಂತಿಯಂದು, ನಟ ಉಪೇಂದ್ರ ಇದಕ್ಕೆ ಚಾಲನೆ ನೀಡಿದ್ದರು. ಈ ಐದು ವರ್ಷದಲ್ಲಿ ‘ನಮ್ಮ ಫ್ಲಿಕ್ಸ್’ ಭಿನ್ನ, ವಿಭಿನ್ನ ಕಂಟೆಂಟ್ ಅಧರಿತ ಚಿತ್ರಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದೆ. ಫ್ಯಾಮಿಲಿ ಡ್ರಾಮಾ, ಸಸ್ಪೆನ್ಸ್-ಥ್ರಿಲ್ಲರ್, ಕಾಮಿಡಿ ಸೇರಿ ವಿವಿಧ ಜಾನರ್ 200ಕ್ಕೂ ಅಧಿಕ ಸಿನಿಮಾಗಳನ್ನು ಈ ವೇದಿಕೆಯಲ್ಲಿ ವೀಕ್ಷಿಸಬಹುದಾಗಿದೆ. ಕನ್ನಡದ ‘ವಿಜಯಾನಂದ’, ‘ಮ್ಯಾಟ್ನಿ’, ‘ಇಂತಿ ನಿಮ್ಮ ಬೈರಾ’, ‘ನೈಟ್​ರೋಡ್’, ‘ಕ್ರಿಟಿಕಲ್ ಕೀರ್ತನೆಗಳು’, ‘ರುದ್ರಿ’, ‘1980’ ಸೇರಿ ಹಲವು ಸಿನಿಮಾಗಳು ಈ ಫ್ಲಾಟ್​ಫಾರಂನಲ್ಲಿ ಪ್ರಸಾರವಾಗುತ್ತಿವೆ.

ಮುಂದಿನ ಯೋಜನೆ

‘ನಮ್ಮ ಫ್ಲಿಕ್ಸ್’ ಸಿನಿಮಾ, ಧಾರಾವಾಹಿಗಳಿಂದ ಹೊಸ ಕ್ಷೇತ್ರಗಳಿಗೆ ವಿಸ್ತರಿಸುತ್ತಿದೆ. ಈ ವೇದಿಕೆ ಮೂಲಕ ವೆಬ್ ಸಿರೀಸ್, ಮೈಕ್ರೋ ಡ್ರಾಮಾ ಕಂಟೆಂಟ್, ನಾಡಿನ ಸಾಧಕರ ಸಂದರ್ಶನಗಳನ್ನು ಪ್ರಸಾರ ಮಾಡಲು ನಿರ್ಧರಿಸಿದೆ. ಈಗಾಗಲೇ ಎರಡು ಎಪಿಸೋಡ್ ಇರುವ ‘ಶಾರ್ಟ್ ಸಿರೀಸ್’ ನಿರ್ವಿುಲಾಗಿದ್ದು, ಶೀಘ್ರದಲ್ಲಿಯೇ ಈ ಹೊಸ ಪ್ರಯತ್ನವನ್ನು ವೀಕ್ಷಿಸಬಹುದಾಗಿದೆ.

ವಿವಿಧ ಕಂಪನಿಗಳೊಂದಿಗೆ ಹೊಸ ಒಪ್ಪಂದ

‘ನಮ್ಮ ಫ್ಲಿಕ್ಸ್’ ಸಂಸ್ಥೆಯು ಟಾಟಾ ಪ್ಲೇ, ಏರ್​ಟೆಲ್, ಡಿಶ್ ಟಿವಿ, ಸನ್​ಡೈರೆಕ್ಟ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬಿಎಸ್​ಎನ್​ಎಲ್ ಜತೆ ಸೇರಿಕೊಳ್ಳಲಿದೆ. ‘ಮ್ಯಾಂಗೋ ಮಾಸ್ ಮೀಡಿಯಾ’ ಜತೆ ಟೈ-ಅಪ್ ಆಗಿದ್ದು, ಇದರ ಪ್ರಕಾರ 100ಕ್ಕೂ ಅಧಿಕ ತೆಲುಗು ಸಿನಿಮಾಗಳು ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ನಟರಾದ ಪವನ್​ಕಲ್ಯಾಣ್, ಜೂ.ಎನ್​ಟಿಆರ್, ನಾಗಾ ಚೈತನ್ಯ, ನಟಿ ಅನುಷ್ಕಾ ಶೆಟ್ಟಿ ಸೇರಿ ಹಲವು ಖ್ಯಾತ ನಟರ ಚಿತ್ರಗಳನ್ನು ನೋಡಬಹುದು. ‘ನಮ್ಮ ಫ್ಲಿಕ್ಸ್’ ಕಂಟೆಂಟ್ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಇಡೀ ಕುಟುಂಬ ಕುಳಿತು ನೋಡುವ ಹಾಗೂ ಕನ್ನಡ ಹಿರಿಮೆ, ಗರಿಮೆ ಸಾರುವ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ’ ಎಂದು ಸಿಇಒ ವಿಜಯ್ ಪ್ರಕಾಶ್ ಮಾಹಿತಿ ನೀಡುತ್ತಾರೆ. ‘ನಮ್ಮ ಫ್ಲಿಕ್ಸ್’ ನಲ್ಲಿ ಸಿನಿಮಾ, ಧಾರಾವಾಹಿ ವೆಬ್ ಸರಣಿ ಸೇರಿ ಹಳೆಯ ಕನ್ನಡ ಸಿನಿಮಾಗಳನ್ನು ಉತ್ತಮ ಗುಣಮಟ್ಟದಲ್ಲಿ ಕಡಿಮೆ ಅನಿಸುವ ಸ್ಪರ್ಧಾತ್ಮಕ ದರದಲ್ಲಿ ವೀಕ್ಷಿಸಬಹುದು. ಈ ಆಪ್ ಆಂಡ್ರಾಯ್ಡ್​  ಐಒಎಸ್, ಆಂಡ್ರಾಯ್ಡ್​  ಟಿವಿಗಳಲ್ಲಿ ಉಚಿತ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಗುಣಮಟ್ಟದ ಎಚ್​ಡಿ ಕ್ವಾಲಿಟಿಯೊಂದಿಗೆ ಸಿನಿಮಾ ವೀಕ್ಷಿಸಬಹುದು.

ವಿಜಯಾನಂದಗೆ ಉತ್ತಮ ಪ್ರತಿಕ್ರಿಯೆ

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರ ‘ವಿಜಯಾನಂದ’ ಚಿತ್ರ ‘ನಮ್ಮ ಫ್ಲಿಕ್ಸ್’ನಲ್ಲಿ ಇದೇ ವರ್ಷದ ಫೆ.14ರಂದು ರಿಲೀಸ್ ಆಗಿತ್ತು. ಸ್ಪೂರ್ತಿದಾಯಕವಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಹೆಚ್ಚು ಪ್ರತಿಕ್ರಿಯೆಗಳು ಬಂದಿದ್ದವು. ‘ನಮ್ಮ ಫ್ಲಿಕ್ಸ್’ ವೇದಿಕೆಗೆ ಬೂಸ್ಟ್ ನೀಡಿತ್ತು. ಕನ್ನಡ ನೆಲದ ಸೊಗಡಿನ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ‘ವಿಜಯಾನಂದ’ ಸೇರಿ ‘ಪತಿ ಬೇಕು.ಕಾಮ್, ‘ಮ್ಯಾಟ್ನಿ’ ಸಿನಿಮಾ ಗಳು ಅತಿಹೆಚ್ಚು ವೀಕ್ಷಣೆ ಕಂಡಿವೆ ಎಂದು ವಿಜಯ್ ಪ್ರಕಾಶ ಮಾಹಿತಿ ನೀಡುತ್ತಾರೆ.

‘ಜೂನಿಯರ್’ ಪ್ರದರ್ಶನ

ನಟ ಕಿರೀಟಿ ಜನಾರ್ದನ ರೆಡ್ಡಿ ಅಭಿನಯದ ‘ಜೂನಿಯರ್’ ಚಿತ್ರವು ಜುಲೈ 18ಕ್ಕೆ ರಾಜಾದ್ಯಂತ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಇದೀಗ ಈ ಸಿನಿಮಾವು ‘ನಮ್ಮ ಫ್ಲಿಕ್ಸ್’ನಲ್ಲಿ ಮಂಗಳವಾರ (ಸೆ.30) ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ಖ್ಯಾತನಟರ ಸಿನಿಮಾಗಳನ್ನು ನಿರೀಕ್ಷಿಸಬಹುದು ಎಂದು ವಿಜಯ್ ಪ್ರಕಾಶ್ ಮಾಹಿತಿ ನೀಡುತ್ತಾರೆ.

‘ನಮ್ಮ ಫ್ಲಿಕ್ಸ್’ ಆಪ್​ನ್ನು ಈಗಾಗಲೇ 4.50 ಲಕ್ಷ ಜನ ಡೌನ್​ಲೋಡ್ ಮಾಡಿದ್ದಾರೆ. ತಿಂಗಳಿಗೆ ಒಂದು ಲಕ್ಷ ಜನ ವೀಕ್ಷಕರಿದ್ದಾರೆ. ಕನ್ನಡ ಸಿನಿಮಾ, ಕಂಟೆಂಟ್​ಗಳಿಗೆ ಇದು ವೇದಿಕೆಯಾಗಿದ್ದು, ಕನ್ನಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಹಿನ್ನೆಲೆಯಲ್ಲಿ ‘ನಮ್ಮ ಫ್ಲಿಕ್ಸ್’ನಿಂದ ಹೊಸ ಹೊಸ ಯೋಜನೆಗಳನ್ನು ಮುಂದೆ ನೋಡಬಹುದು. | ವಿಜಯ್ ಪ್ರಕಾಶ್ ಸಂಸ್ಥಾಪಕರು, ಸಿಇಒ, ‘ನಮ್ಮ ಫ್ಲಿಕ್ಸ್’

ಚಂದಾ ವಿವರ

ಪಾಕ್ಷಿಕ: -49 ರೂ.

ಮಾಸಿಕ: - 79 ರೂ.

ತ್ರೖೆಮಾಸಿಕ: 149 ರೂ.

ಅರ್ಧ ವಾರ್ಷಿಕ: -249 ರೂ.

ವಾರ್ಷಿಕ: -499 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net