ಚೊಚ್ಚಲ ಮಗುವಿನ ತಾಯಿಯಾಗಲಿದ್ದಾರೆ ಆಲಿಯಾಭಟ್​​: ಸಂಭ್ರಮ ಹಂಚಿಕೊಂಡಿದ್ದು ಹೀಗೆ!

alia
Published on

ಮುಂಬೈ: ಕಳೆದ ಎರಡು ತಿಂಗಳ ಹಿಂದೆ ಹಸೆಮಣೆಯೇರಿದ್ದ ಬಾಲಿವುಡ್​ ತಾರಾ ಜೋಡಿ, ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​​ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಸದ್ಯದಲ್ಲೇ ನಾವು ತಂದೆ-ತಾಯಿ ಆಗುತ್ತಿದ್ದೇವೆ, ಇನ್ನು ಕೆಲವೇ ತಿಂಗಳಲ್ಲಿ ನಮ್ಮ ಮನೆಗೆ ಮಗು ಬರಲಿದೆ ಎಂದು ಆಲಿಯಾ ಭಟ್​ ಹೇಳಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್​ ಮಾಡಿಕೊಂಡಿರುವ ನಟಿ ಆಲಿಯಾ, ಸದ್ಯದಲ್ಲೇ ನಮ್ಮ ಮಗು ಬರಲಿದೆ ಎಂದು ಬರೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿನ ಸ್ಕ್ಯಾನ್​ ಸೆಂಟರ್​​ನಲ್ಲೇ ಆಲಿಯಾ ಮಲಗಿರುವ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಗಂಗೂಬಾಯಿ ಕಾಥಿಯಾವಾಡಾ ಬಳಿಕ ಆರ್​​ಆರ್​​ಆರ್​​ ಆಲಿಯಾಭಟ್​​ಗೆ ಭಾರೀ ಖ್ಯಾತಿ ತಂದುಕೊಟ್ಟಿತ್ತು. ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net