'ಪಾರ್ಕಿಂಗ್'​, '8 ವಸಂತಲು'... ನೀವು ಮಿಸ್​ ಮಾಡದೆ ನೋಡಲೇಬೇಕಾದ ಒಟಿಟಿ ಚಿತ್ರಗಳಿವು! OTT

ವಿಜಯವಾಣಿ (41)
Published on

OTT: ಭಾರತೀಯ ಚಿತ್ರೋದ್ಯಮ ಸೇರಿದಂತೆ ಹಾಲಿವುಡ್​ಸಿನಿಮಾಗಳು ಒಟಿಟಿಯಲ್ಲಿ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿವೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಚಿತ್ರಗಳಿಗಿಂತ ನೇರವಾಗಿ ಒಟಿಟಿಯಲ್ಲೇ ತೆರೆಕಂಡ ಸಿನಿಮಾಗಳು ಪ್ರೇಕ್ಷಕರ ಕುತೂಹಲವನ್ನು ಕೆರಳಿಸುತ್ತಿದೆ ಹಾಗೂ ರೋಚಕ, ರೋಮಾಂಚಕ ಅನುಭವವನ್ನು ನೀಡುತ್ತಿವೆ.

ನವೀರಾದ ಪ್ರೇಮಕಥೆ, ಕ್ರೈಂ ಥ್ರಿಲ್ಲರ್​ ಕಥಾಹಂದರಗಳು ನೋಡುಗರ ಗಮನವನ್ನು ಸೆಳೆಯುತ್ತಿವೆ. ಮಲಯಾಳಂ, ತಮಿಳು, ತೆಲುಗು ಮತ್ತು ಇಂಗ್ಲಿಷ್​ ಭಾಷೆಯ ಚಿತ್ರಗಳು ಸದ್ಯ ಒಟಿಟಿಯಲ್ಲಿ ಸಖತ್ ಸದ್ದು ಮಾಡುತ್ತಿವೆ. ಚಿತ್ರಮಂದಿರಗಳಲ್ಲಿ ಸೋತ ಕೆಲವೊಂದು ಸಿನಿಮಾಗಳು ಒಟಿಟಿ ಅಂಗಳದಲ್ಲಿ ಮಿಂಚಿದರೆ, ಇನ್ನು ಕೆಲವು ಚಿತ್ರಗಳು ಸರಳ ಕಥೆಯಿಂದಲೇ ವೀಕ್ಷಕರ ಮನತಟ್ಟುತ್ತಿವೆ. ಹಾಗಿದ್ದರೆ, ಯಾವುದು ಆ ಸಿನಿಮಾಗಳು? ಮತ್ತೇ ಮತ್ತೇ ನೋಡಬೇಕು ಎನಿಸುವಂತೆ ಸೆಳೆಯುವ ಚಿತ್ರಗಳು ಯಾವುವು? ಎಂಬುದರ ಪಟ್ಟಿ ಇಲ್ಲಿದೆ ನೋಡಿ.

1. ಪಾರ್ಕಿಂಗ್​​ (ತಮಿಳು)

ಒಟಿಟಿ: ಜಿಯೋ ಹಾಟ್​ಸ್ಟಾರ್​

ಬಾಡಿಗೆ ಮನೆಯಲ್ಲಿರುವ ಇಬ್ಬರು ಒಂದು ಪಾರ್ಕಿಂಗ್ ಲಾಟ್​ಗೆ ಎಷ್ಟೆಲ್ಲ ಜಗಳವಾಡುತ್ತಾರೆ. ಸಣ್ಣ ವಿಚಾರವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂಬುದೇ ರೋಚಕ ಕಥಾಹಂದರ. ಇತ್ತೀಚೆಗಷ್ಟೇ ಈ ಸಿನಿಮಾಗೆ ತಮಿಳಿನ 'ಅತ್ಯುತ್ತಮ ಚಿತ್ರ' ಎಂಬ ರಾಷ್ಟ್ರಪ್ರಶಸ್ತಿ ಲಭಿಸಿತು.

2. ಬಾಯ್​ಹುಡ್​ (ಇಂಗ್ಲಿಷ್​)

ಒಟಿಟಿ: ಜಿಯೋ ಹಾಟ್​ಸ್ಟಾರ್​

ಬಾಲ್ಯದಲ್ಲೇ ತನ್ನ ತಂದೆ-ತಾಯಿ ಡಿವೋರ್ಸ್​ ಪಡೆದಾಗ, ತನ್ನ ಅಕ್ಕ ಮತ್ತು ಅಮ್ಮನ ಜೊತೆಯಲ್ಲೇ ಜೀವನ ಸಾಗಿಸುವ ಮಧ್ಯೆ ಏನೆಲ್ಲ ನಡೆಯಲಿದೆ. 12 ವರ್ಷಗಳಲ್ಲಿ ಆ ಹುಡುಗ ಎದುರಿಸುವ ಸಮಸ್ಯೆಗಳೇನು ಎಂಬುದೇ ಕಥೆ.

3. ಲಬ್ಬರ್​ ಪಾಂಡು (ತಮಿಳು)

ಒಟಿಟಿ: ಜಿಯೋ ಹಾಟ್​ಸ್ಟಾರ್​

ಹಳ್ಳಿಯ ಕಥೆ, ಗಲ್ಲಿ ಕ್ರಿಕೆಟ್​, ಇಬ್ಬರ ನಡುವಿನ ಜಿದ್ದು ಯಾವ ಹಂತಕ್ಕೆ ಹೋಗಲಿದೆ? ಅದರಿಂದ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲು ಸಾಧ್ಯವೇ? ಅನ್ನೋದು ಕಥಾಹಂದರ.

4. ಗುಡ್​ ನೈಟ್​ ( ತಮಿಳು)

ಒಟಿಟಿ: ಜಿಯೋ ಹಾಟ್​​ಸ್ಟಾರ್​

ಮಿಡಲ್​ ಕ್ಲಾಸ್​ ಕುಟುಂಬದ ಹುಡುಗ ರಾತ್ರಿ ಮಲಗಿದ್ದಾಗ ಹೊಡೆಯುವ ಗೊರಕೆ ಶಬ್ದ ಎಷ್ಟೆಲ್ಲ ಹಿಂಸೆ ಕೊಡುತ್ತದೆ? ಒಂದು ಸಣ್ಣ ಗೊರಕೆ ಯಾವ ಹಂತಕ್ಕೆ ಸಮಸ್ಯೆಯನ್ನು ನೀಡುತ್ತದೆ ಅನ್ನೋದು ಈ ಚಿತ್ರದಲ್ಲಿದೆ.

5. ಫೋರೆನ್ಸಿಕ್​​ (ಮಲಯಾಳಂ)

ಒಟಿಟಿ: ಆಹಾ, ನೆಟ್​ಫ್ಲಿಕ್ಸ್​

ತಮ್ಮ ಸುತ್ತಮುತ್ತಲೇ ನಡೆಯುವ ಸರಣಿ ಕೊಲೆಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಕಲೆಹಾಕುವುದೇ ಪೊಲೀಸ್​ ತಂಡಕ್ಕೆ ಸವಾಲಾಗಿರುತ್ತದೆ. ಇದು ಫೋರೆನ್ಸಿಕ್​ ತನಿಖೆಯಲ್ಲಿ ಏನೆಲ್ಲ ಸುಳಿವು ಕೊಡುತ್ತದೆ? ಯಾರ ತಪ್ಪಿತಸ್ಥರು ಅನ್ನೋ ವಿಷಯ ಕಡೆಯಲ್ಲಿ ತಿಳಿಯುವುದೇ ರೋಚಕ.

6. ಡಿಎನ್​ಎ (ತಮಿಳು)

ಒಟಿಟಿ: ಜಿಯೋ ಹಾಟ್​ಸ್ಟಾರ್​

ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿರುವ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಏನೆಲ್ಲ ಸಮಸ್ಯೆಗಳು ಕಾಡುತ್ತದೆ. ದಂಪತಿಗಳಿಗೆ ಜನಿಸಿದ ಮಗು ಅದಲು-ಬದಲು ಆದಾಗ ಅದನ್ನು ಪತ್ತೆಹಚ್ಚುವುದೇಗೆ ಎಂಬುದೇ ಕೊನೆಯವರೆಗೂ ಕಾಡುವ ಪ್ರಶ್ನೆ.

7. ನೆಟ್ರಿಕಾನ್​ (ತಮಿಳು)

ಒಟಿಟಿ: ಜಿಯೋ ಹಾಟ್​ಸ್ಟಾರ್

ಒಬ್ಬ ಖಡಕ್ ಸಿಬಿಐ ಪೊಲೀಸ್​ ಅಧಿಕಾರಿ ಅಪಘಾತದಲ್ಲಿ ತನ್ನ ಕಣ್ಣು ಕಳೆದುಕೊಂಡ ಬಳಿಕ ಎದುರಿಸುವ ಕಷ್ಟಗಳು ಮತ್ತು ಕುರುಡಾಗಿಯೇ ಓರ್ವ ಸೈಕೋ ಕ್ರಿಮಿನಲ್​ ಅನ್ನು ಪತ್ತೆಹಚ್ಚುವ ರೀತಿ ನೋಡುಗರ ಕುತೂಹಲವನ್ನು ಕೆರಳಿಸುತ್ತದೆ.

8. ಮಂಡಲಾ ಮರ್ಡರ್ಸ್​ (ವೆಬ್​ ಸರಣಿ)

ಭಾಷೆ: ಹಿಂದಿ

ಒಟಿಟಿ: ನೆಟ್​ಫ್ಲಿಕ್ಸ್​

ಸರಣಿ ಕೊಲೆಗಳನ್ನು ಪತ್ತೆಹಚ್ಚುವುದು ಮತ್ತು ಅದರ ಹಿಂದಿರುವ ಕಾಣದ ಕೈಗಳು ಯಾರದ್ದು ಎಂದು ತನಿಖೆ ಕೈಗೊಳ್ಳುವ ಇಬ್ಬರು ತನಿಖಾಧಿಕಾರಿಗಳ ಕಥೆಯೇ ರೋಚಕ. ಸಣ್ಣ ಸಾಕ್ಷಿಗಳು ಕೇಸ್​ನ ಆರೋಪಿಗಳನ್ನು ಹೇಗೆ ಹುಡುಕಿಕೊಡುತ್ತದೆ ಎಂಬುದೇ ಸರಣಿಯ ಕಥಾಹಂದರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net