ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ; ಪಾರಸೈಟ್​ ಚಿತ್ರದ ಬಾಂಗ್ ಜೂನ್-ಹೋ ಅತ್ಯುತ್ತಮ ನಿರ್ದೇಶಕ, ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ

OSCAR
Published on

ಲಾಸ್ ಏಂಜಲೀಸ್‌: ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭಗೊಂಡಿದ್ದು ಬ್ರಾಡ್ ಪಿಟ್, ಒನ್ಸ್​ ಅಪಾನ್​ ಎ ಟೈಮ್​ ಇನ್​ ಹಾಲಿವುಟ್​ ಚಿತ್ರದ ನಟನೆಗಾಗಿ ಅತ್ಯುತ್ತಮ ಪೋಷಕ ನಟ, ಒಬಾಮರ ಅಮೆರಿಕ ಫ್ಯಾಕ್ಟರಿ ಅತ್ಯುತ್ತಮ ಸಾಕ್ಷ್ಯಚಿತ್ರವಾಗಿದೆ.

ಬಾಂಗ್​ ಜೂನ್​ ಹೊ ಅವರ ಪಾರಸೈಟ್​ ಚಿತ್ರಕ್ಕೆ ಅತ್ಯುತ್ತಮ ಮೂಲ ಚಿತ್ರಕಥೆ ಪ್ರಶಸ್ತಿ ಒಲಿದಿದೆ.

ನನಗೆ ಮಾತನಾಡಲು 45 ಸೆಕೆಂಡುಗಳಿವೆ ಎಂದು ಆಯೋಜಕರು ಹೇಳಿದರು. ಇದು ಈ ವಾರ ಜಾನ್ ಬೋಲ್ಟನ್‌ಗೆ ಸೆನೆಟ್ ನೀಡಿದ 45 ಸೆಕೆಂಡುಗಳು ಹೆಚ್ಚು” ಎಂದು ಪಿಟ್ ತಮ್ಮ ಸಂತಸವನ್ನು ಹಂಚಿಕೊಂಡರು. ಚಿತ್ರರಂಗದಲ್ಲಿ ನನ್ನ ಪ್ರಯಾಣವನ್ನು ಪ್ರತಿಬಿಂಬಿಸಲು ಈ ಗೌರವ ಕಾರಣವಾಗಿದೆ ಎಂದು ಅವರು ಹೇಳಿದರು.

ಅತ್ಯುತ್ತಮ ನಿರ್ದೇಶಕ ಪಾರಸೈಟ್​: ಪಾರಸೈಟ್​ ಚಿತ್ರದ ಬಾಂಗ್ ಜೂನ್-ಹೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net