ವಿದ್ಯುತ್ ಕಂಬ ತೆರವಿಗೆ ಸಭೆ ಆಯೋಜಿಸಿ

mescom
ಶಿವಮೊಗ್ಗದಲ್ಲಿ ತೆರವಿಗಾಗಿ ಕಾದಿರುವ ವಿದ್ಯುತ್ ಕಂಬಗಳು.
Published on

ಶಿವಮೊಗ್ಗ: ಮೆಸ್ಕಾಂ ಮತ್ತು ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ಭೂಗತ ಕೇಬಲ್ ಅಳವಡಿಸಿದ ಬಳಿಕ ಹಳೆಯ ವಿದ್ಯುತ್ ಕಂಬಗಳನ್ನು ತೆರವು ಮಾಡದಿರುವುದನ್ನು ಚರ್ಚಿಸಲು ಜನಪ್ರತಿನಿಧಿಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇನ್ನೊಂದು ವಾರದಲ್ಲಿ ಸಭೆಗೆ ದಿನಾಂಕ ನಿಗದಿ ಮಾಡದೆ ಇದ್ದರೆ ಹೋರಾಟ ನಡೆಸಲಾಗುವುದು ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಬಗ್ಗೆ ಸೋಮವಾರ ಜಿಲ್ಲಾಡಳಿತಕ್ಕೆ ಎರಡನೇ ಬಾರಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಸಂಸದರು ಮತ್ತು ಶಿವಮೊಗ್ಗ ಶಾಸಕರ ನೇತೃತ್ವದಲ್ಲಿ ಚರ್ಚಿಸಿ ಪರಿಹರಿಸಲು ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳನ್ನು ಕೋರಿದ್ದೆವು. ಸ್ಮಾರ್ಟ್ ಸಿಟಿ ಮತ್ತು ಮೆಸ್ಕಾಂನಿಂದ ಹಳೆಯ ವಿದ್ಯುತ್ ಕಂಬಗಳನ್ನು ತೆರವು ಮಾಡದೆ ಇರುವಲ್ಲಿ ದೊಡ್ಡ ಲೋಪವಾಗಿದ್ದರೂ ಈವರೆಗೆ ಯಾವುದೇ ಸಭೆ ಆಯೋಜಿಸಿಲ್ಲ ಎಂದು ದೂರಿದರು.

ಭೂಗತ ಕೇಬಲ್ ಕೆಲಸ ಮಾಡುವ ಮೊದಲು, ರಸ್ತೆ ಒಂದು ಬದಿಗೆ ಕಂಬಗಳಿದ್ದವು, ಈಗ ರಸ್ತೆಗಳ ಎರಡು ಬದಿಗೆ ವಿದ್ಯುತ್ ಕಂಬಗಳಿವೆ ಎಂದು ಕಿಡಿಕಾರಿದರು. ಒಂದು ವಾರದೊಳಗೆ ಡಿಸಿ ಅವರು ಸಭೆಗೆ ದಿನಾಂಕ ನಿಗಧಿಪಡಿಸದಿದ್ದರೆ ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net