ಸಣ್ಣ ಸಮುದಾಯಗಳಿಗೆ ಸಂಘಟನೆಯೇ ಬಲ

Bhagiratha Cooperative Society
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶ್ರೀ ಭಗೀರಥ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಡಾ. ಪಿ.ರಂಗನಾಥ, ಎಂ.ಜಿ.ಕೆ.ಹನುಮಂತಪ್ಪ, ಎನ್.ಮಂಜುನಾಥ, ವಸಂತ ಹೋಬಳಿದಾರ್, ಎಲ್.ಮಂಜುನಾಥ, ಎಚ್.ರವಿ, ಯು.ಕೆ.ವೆಂಕಟೇಶ್, ಯು.ಕೆ.ರಮೇಶ್ ಇತರರಿದ್ದರು.
Published on

ಶಿವಮೊಗ್ಗ: ಸಣ್ಣ ಸಮುದಾಯಗಳಿಗೆ ಸಂಘಟನೆಯೇ ಬಲ. ಹಾಗಾಗಿ ಸಣ್ಣ ಸಣ್ಣ ಸಮುದಾಯದವರೆಲ್ಲ ಒಗ್ಗೂಡಿ ಸಂಘಟನೆ ಬಲಪಡಿಸಬೇಕು ಎಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶ್ರೀ ಭಗೀರಥ ಸಹಕಾರ ಸಂಘದ 3ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರನ್ನು ಗೌರವಿಸಿ ಮಾತನಾಡಿದ ಅವರು, ಸಣ್ಣ ಸಮುದಾಯಗಳು ನಾವೇಕೆ ಹಿಂದುಳಿದಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದಿಂದ ಸಾಲ ಪಡೆದು ವಿವಿಧ ಚಟುವಟಿಕೆಗಳಲ್ಲಿ ಅದನ್ನು ತೊಡಗಿಸಿ ಉನ್ನತಿ ಆಗಬೇಕು. ಸಕಾಲಕ್ಕೆ ಮರುಪಾವತಿ ಮಾಡಬೇಕು. ನಾವು ಸಮಾಜದಿಂದ ಏನನ್ನು ಪಡೆದಿದ್ದೇವೆಯೋ ಅದನ್ನು ಮರಳಿ ಸಮಾಜಕ್ಕೆ ಕೊಡಬೇಕು. ಇನ್ನೊಬ್ಬರು ಮೇಲೆ ಬರಲು ನಾವು ನೆರವಾಗಬೇಕು. ಸಮಾಜದಲ್ಲಿನ ಭಿನ್ನಮತ ತೊಡೆದುಹಾಕಿ ಒಳಿತಿಗಾಗಿ ಎಲ್ಲರೂ ಮುನ್ನಡೆಯಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎನ್.ಮಂಜುನಾಥ ಮಾತನಾಡಿ, ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಆ ಮೂಲಕ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿ ಉದ್ಯೋಗ ಮತ್ತು ಆರ್ಥಿಕತೆಯಲ್ಲಿ ಉನ್ನತ್ತಿ ಪಡೆಯಲು ಸಾಧ್ಯ. ಜಿಲ್ಲೆಯ ಸಮಾಜದವರು ಭಗೀರಥ ಸಹಕಾರ ಸಂಘದ ಷೇರುದಾರರಾಗುವ ಮೂಲಕ ಮಾದರಿ ಸಹಕಾರ ಸಂಘ ಎಂದು ಹೆಸರು ಗಳಿಸಲು ಸಂಕಲ್ಪ ಮಾಡಬೇಕು ಎಂದರು.

ಸಮಾಜದ ನಿವೃತ್ತ ಅಧಿಕಾರಿಗಳು ಮತ್ತು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ವಸಂತ ಹೋಬಳಿದಾರ್, ನಿರ್ದೇಶಕರಾದ ಎಂ.ಜಿ.ಕೆ.ಹನುಮಂತಪ್ಪ, ಎಲ್.ಮಂಜುನಾಥ, ಎಚ್.ರವಿ, ಯು.ಕೆ.ವೆಂಕಟೇಶ್, ಯು.ಕೆ.ರಮೇಶ್, ಜಿ.ಚಿದಾನಂದ, ಕೆ.ಶ್ರೀನಿವಾಸ, ಎಸ್.ಪಿ.ಸುಧಾಕರ, ವೈ.ಬಿ.ಲೋಕೇಶ್, ಎಲ್.ಚಂದ್ರಶೇಖರ್, ಅರ್ಚನಾ, ಕೆ.ಟಿ.ಶ್ರೀನಿವಾಸ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net