ಸಾವಯವ ಕೃಷಿ ಅಗತ್ಯವಾಗಿದೆ; ಕಾಶಿ ಜಗದ್ಗುರುಗಳ ಹೇಳಿಕೆ

28-RNR-03
Published on

ರಾಣೆಬೆನ್ನೂರ: ಸಾವಯವ ಕೃಷಿ ಇಂದಿನ ಅಗತ್ಯವಾಗಿದೆ. ಭಗವಂತ ಕೊಟ್ಟಿರುವ ಈ ಭೂಮಿ ಹಾಗೂ ಸುತ್ತಮುತ್ತಲಿನ ಪರಿಸರ ಬಳಸಿಕೊಂಡು ಶರಣರ ವಚನಗಳಂತೆ ಸ್ವರ್ಗಮಯವಾಗಿಸಿಕೊಳ್ಳಬೇಕು ಎಂದು ಕಾಶಿ ಪೀಠದ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಚನ್ನೇಶ್ವರ ಮಠದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಗುರುವಾರ ಏರ್ಪಡಿಸಿದ್ದ ಹುಬ್ಬಳ್ಳಿ ಹೊಸಮಠದ ಲಿಂ. ಶಿವಬಸವ ಸ್ವಾಮೀಜಿ ಸ್ಮಾರಕ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವೃತ್ತಿಪರ ಶಿಕ್ಷಣವನ್ನು ಕಲಿತ ಯುವಜನತೆ ದುಡಿಯುವ ಕೈಗಳಿಗೆ ದುಡಿಮೆ ಕೊಡುವ ಅವಶ್ಯಕತೆಯಿದೆ. ಕಲಿತ ವಿದ್ಯೆಯನ್ನು ಬಳಸಿಕೊಂಡು ನೌಕರಿಗಾಗಿ ಕಾಯದೆ ಹಲವಾರು ಜನರಿಗೆ ಉದ್ಯೋಗದಾತರಾಗಬೇಕು ಎಂದರು.

ವೀರಶೈವ ಧಾಮಿರ್ಕ ಆಚಾರ ವಿಚಾರ ಮತ್ತು ಸಾವಯವ ಕೃಷಿ ಕುರಿತು ಹಾವೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಅಧೀಕ್ಷಕ ಸೋಮಶೇಖರಯ್ಯ ಹಿರೇಮಠ ಹಾಗೂ ವೃತ್ತಿ ಶಿಕ್ಷಣ ವರ್ತಮಾನದ ಅಗತ್ಯ ಕುರಿತು ದಾವಣಗೆರೆಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್​.ಬಿ. ಮಲ್ಲೂರ ವಿಶೇಷ ಉಪನ್ಯಾಸ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಗೌರವ ಕಾರ್ಯದಶಿರ್ ಜಗದೀಶ ಮಳಿಮಠ, ಬಸವರಾಜಣ್ಣ ಪಟ್ಟಣಶೆಟ್ಟಿ, ಅಮೃತಗೌಡ ಹಿರೇಮಠ, ಪ್ರಭಾಕರ ಶಿಗ್ಲಿ, ಜಗದೀಶ ಮಳಿಮಠ, ಎಸ್​.ಎಚ್​. ಪಾಟೀಲ, ಗುಡ್ಡಪ್ಪ ಹಿಂದಿನಮನಿ, ರಜನಿ ಕರಿಗಾರ, ಬಿ.ಪಿ. ಶಿಡೇನೂರ, ವಿ.ವಿ. ಹರಪನಹಳ್ಳಿ, ವಾಸುದೇವ ಗುಪ್ತಾ, ಉಮೇಶ ಗುಂಡಗಟ್ಟಿ, ಚಂದ್ರಪ್ಪ ಸೊಪ್ಪಿನ, ನಿತ್ಯಾನಂದ ಕುಂದಾಪುರ, ಕೆ.ಎಂ. ಹಾಲಸಿದ್ದಯ್ಯಸ್ವಾಮಿ, ಗೌರಿಶಂಕರ ನೆಗಳೂರುಮಠ, ಸೋಮನಾಥ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net