ಸಾರ್ವಜನಿಕ ಹಿತಕ್ಕಾಗಿ ಅರಮನೆ ಮೈದಾನ ನಿಯಂತ್ರಣ: ಸಿಎಂ ಸಿದ್ದರಾಮಯ್ಯ ಸಮರ್ಥನೆ | CM ruled out Raja matha allegation

Siddaramaiah
Published on

ಬೆಂಗಳೂರು: ಮೈಸೂರು ಮಹಾರಾಜರ ಕುಟುಂಬದವರ ವಿರುದ್ಧ ದ್ವೇಷ ಸಾಧಿಸುವುದಕ್ಕಲ್ಲ, ಸಾರ್ವಜನಿಕ ಹಿತದ ನಿರ್ಧಾರವದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಬೆಂಗಳೂರಿನ ಅರಮನೆ ಮೈದಾನದ ಒಡೆತನ ಸಂಬಂಧಿತ ದಾಖಲೆಗಳು ನಮ್ಮಲ್ಲಿವೆ. ಮೈಸೂರು ರಾಜಮನೆತನದ ಮೇಲೆ ದ್ವೇಷ ಸಾಧಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ರಾಜಮಾತೆ ಪ್ರಮೋದಾದೇವಿ ಆರೋಪಕ್ಕೆ ಸಿಎಂ ಪ್ರತ್ಯುತ್ತರಿಸಿದರು.

ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ಉತ್ತರಿಸಿ, ಬೆಂಗಳೂರಿನ ಅರಮನೆ ಮೈದಾನದ ಮೇಲೆ ಸರ್ಕಾರದ ನಿಯಂತ್ರಣ ಹಾಗೂ ಟಿಡಿಆರ್ ಕೊಡುವುದಿಲ್ಲವೆಂದು ಸುಗ್ರೀವಾಜ್ಞೆ ಹೊರಡಿಸಿದ್ದು, ಅಭಿವೃದ್ಧಿಗೆ ಅಡಚಣೆ ಮತ್ತು ಬೊಕ್ಕಸಕ್ಕೆ ಆರ್ಥಿಕ ಹೊರೆ ತಪ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಮೂಲ ದಾವೆ ಇತ್ಯರ್ಥವಾಗಿಲ್ಲ

ಒಟ್ಟು 472 ಎಕರೆ ವಿಸ್ತೀರ್ಣದ ಬೆಂಗಳೂರಿನ ಅರಮನೆ ಮೈದಾನದ ಮಾಲೀಕತ್ವದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿರುವ ಮೂಲ ದಾವೆ ಇನ್ನೂ ಇತ್ಯರ್ಥವಾಗಿಲ್ಲ.

ಈ ಸ್ವತ್ತು ಸರ್ಕಾರದ ವಶಕ್ಕೆ ಪಡೆಯಲು 1996ರಲ್ಲಿ ಕಾಯ್ದೆ ಜಾರಿಗೆ ತರಲಾಗಿದೆ. ಹೈಕೋರ್ಟ್ ಕೂಡ ಕಾಯ್ದೆಯನ್ನು ಎತ್ತಿ ಹಿಡಿದಿದೆ. ನಂತರ ಮೈಸೂರಿನ ರಾಜಮನೆತನವು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ.

ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಸೂಚಿಸಿದೆಯೇ ಹೊರತು ರಾಜ್ಯ ಸರ್ಕಾರ ಜಾರಿಗೊಳಿಸಿದ ಕಾಯ್ದೆಗೆ ತಡೆಯಾಜ್ಞೆ ನೀಡಿಲ್ಲ. ಮೂಲ ದಾವೆ ಬೇಗ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಮನವಿ ಮಾಡಲಾಗಿದೆ.

ಕಾರ್ಯಸಾಧುವಲ್ಲದ ಮೊತ್ತ

ನಂತರ ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನಕ್ಕೆ ಸೇರಿದ 15 ಎಕರೆ 17.5 ಗುಂಟೆ ಜಮೀನು ಬಳಕೆ ಸರ್ಕಾರ ಮುಂದಾಗಿತ್ತು. ಇದಕ್ಕೂ ಮೈಸೂರು ರಾಜಮನೆತನ ಆಕ್ಷೇಪವೆತ್ತಿದ್ದು, ಸುಪ್ರೀಂ ಕೋರ್ಟ್ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ)ನಡಿ ಪರಿಹಾರದ ಮೊತ್ತ ಪಾವತಿಸಲು ಸೂಚಿಸಿದೆ.

ಸರ್ಕಾರ ಬಳಸಲು ಉದ್ದೇಶಿತ ಜಮೀನಿಗೆ ಪ್ರತಿ ಎಕರೆಗೆ 200 ಕೋಟಿ ರೂ. ಟಿಡಿಆರ್ ನಿಗದಿ ಕಾರ್ಯಸಾಧುವಲ್ಲ. ಒಟ್ಟು 3,104 ಕೋಟಿ ರೂ. ಟಿಡಿಆರ್ ಮೊತ್ತವು ಸಾರ್ವಜನಿಕ ಹಿತದ್ದಲ್ಲ, ಅಭಿವೃದ್ಧಿಗೂ ಅಡಚಣೆಯಾಗಲಿದೆ ಎಂಬ ಕಾರಣಕ್ಕೆ ಟಿಡಿಆರ್ ಪಾವತಿಸುವುದಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಯೋಜನೆಯ ಚಿಂತನೆ

ಅರಮನೆ ಮೈದಾನದ ಬಳಸುವುದು ಅಥವಾ ಕೈಬಿಡುವುದು ಸೇರಿ ಒಟ್ಟಾರೆ ಸರ್ಕಾರದ ನಿಯಂತ್ರಣ, ಟಿಡಿಆರ್ ಪಾವತಿಸುವುದಿಲ್ಲ ಎಂಬ ಸುಗ್ರೀವಾಜ್ಞೆಯನ್ನು ಅಫಿಡವಿಟ್ ಮುಖೇನ ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು.

ರಸ್ತೆ ಅಗಲೀಕರಣ ಯೋಜನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಮುಂದಿನ ಹೆಜ್ಜೆಯಿಡಲಾಗುವುದು. ರಸ್ತೆ ಅಗಲೀಕರಣ ಬದಲಿಗೆ ಪರ್ಯಾಯ ಯೋಜನೆಯು ಇನ್ನೂ ಚಿಂತನೆ ಹಂತದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ರಾಜಮಾತೆ ಪ್ರಮೋದಾ ದೇವಿಯವರು ೆ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net