ವಿವಿಧ ಹುದ್ದೆಗಳ ಸಂಚಿತ ವೇತನ ಪರಿಷ್ಕರಿಸಿ ಆದೇಶ|Order Revision of Accumulated Pay of Various Posts

Vidhanasoudha
Published on

ಬೆಂಗಳೂರು: ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರ ಮತ್ತಿತರರ ಆಪ್ತ ಶಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ 7ನೇ ವೇತನ ಆಯೋಗದ ಶಿಾರಸಿನಂತೆ ಸಂಚಿತ ವೇತನ ಪರಿಷ್ಕರಿಸಿ(Order Revision of Accumulated Pay of Various Posts) ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ/ಉಪ ಮುಖ್ಯಮಂತ್ರಿ/ಸಚಿವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಸಲಹೆಗಾರರು, ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸಚಿವರ ಸ್ಥಾನಮಾನ ಪಡೆದ ಪ್ರಾಧಿಕಾರಗಳ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು, ಉಪಾಧ್ಯಕ್ಷರ ಆಪ್ತ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ 7ನೇ ವೇತನ ಆಯೋಗದ ಶಿಾರಸಿನ ಅನ್ವಯ ಸಂಚಿತ ವೇತನ ಪರಿಷ್ಕರಿಸಲಾಗಿದೆ. 1.11.2024 ರಿಂದ ಅನ್ವಯವಾಗಿ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಪರಿಷ್ಕೃತ ಸಂಚಿತ ವೇತನ:

ವಿಶೇಷಾಧಿಕಾರಿ/ವಿಶೇಷ ಕರ್ತವ್ಯಾಧಿಕಾರಿಗಳಿಗೆ 69,250 ರೂ., ಸಹಾಯಕ(ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಬದಲಾಗಿ ಸಹಾಯಕ ಹುದ್ದೆಯನ್ನಾಗಿ ಪರಿವರ್ತಿಸಲಾಗಿದೆ) 49,050, ಶೀಘ್ರಲಿಪಿಗಾರ 40,050, ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ/ ಬೆರಳಚ್ಚುಗಾರ/ವಾಹನ ಚಾಲಕರಿಗೆ 34,100 ರೂ. ಹಾಗೂ ಡಿ ದರ್ಜೆ ನೌಕರರಿಗೆ 27 ಸಾವಿರ ರೂ.ಗಳಂತೆ ಪರಿಷ್ಕರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net