

liquor : ಮದ್ಯವು ಈಗಾಗಲೇ ಎಲ್ಲಾ ರಾಜ್ಯದ ಖಜಾನೆಗೆ ಪ್ರಮುಖ ಆದಾಯದ ಮೂಲವಾಗಿದೆ. ಮದ್ಯ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಗ್ರಾಹಕರನ್ನು ಆಕರ್ಷಿಷಲು ಕೆಲವು ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಪ್ರಸ್ತಾವನೆ ಮುನ್ನಲೆಗೆ ಬಂದಿತ್ತು, ಆದರೆ ಈ ಪ್ರಸ್ತಾವನೆಯನ್ನು ಜಾರಿಗೆ ತರಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಇದರ ಮೂಲಕ ಆನ್ಲೈನ್ ಆರ್ಡರ್ ಮತ್ತು ಡೋರ್ ಡೆಲಿವರಿ ಕೂಡ ಲಭ್ಯವಾಗಲಿದೆ. ಇದು ಎಲ್ಲಿ ಅಂತೀರಾ? ಹಾಗಿದ್ದರೆ ಒಮ್ಮೆ ಸುದ್ದಿ ನೋಡಿ...
ಕೇರಳ ಸರ್ಕಾರ ಮದ್ಯ ಪ್ರಿಯರಿಗಾಗಿ ಹೊಸ ಪ್ರಸ್ತಾವನೆಯೊಂದನ್ನು ರೂಪಿಸುತ್ತಿದ್ದು, ಮಾದಕ ವ್ಯಸನಿಗಳಿಗೆ ಮದ್ಯ ತಲುಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿದೆ. ಇನ್ನು ಮದ್ಯ ಪ್ರಿಯರು ಆನ್ಲೈನ್ ಮೂಲಕ ಆರ್ಡರ್ ಮಾಡಿದರೆ, ಅವರ ಮನೆಗಳಿಗೆ ಮದ್ಯ ಬಂದು ತಲುಪುದರ ಜೊತೆಗೆ ಸರ್ಕಾರಕ್ಕೆ ಬರುವ ಆದಾಯ ಹೆಚ್ಚಿಸುತ್ತದೆ. ಈ ಪ್ರಸ್ತಾವನೆಯಿಂದ ಮದ್ಯದ ಅಂಗಡಿಯಲ್ಲಿ ಜನದಟ್ಟಣೆ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.ಈ ಪ್ರಸ್ತಾವನೆಯನ್ನು ಪ್ರಸ್ತುತ ಸರ್ಕಾರ ಪರಿಗಣನೆ ಮಾಡುತ್ತಿದ್ದು, ಇದು ವಾಸ್ತವವಾಗಲು ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಈ ದಿಕ್ಕಿನಲ್ಲಿ ಮುಂದಿನ ವಾರ ಈ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಕೇರಳ ಸರ್ಕಾರ ಸ್ವೀಕರಿಸಿದ ಪ್ರಸ್ತಾವನೆಗಳ ಪ್ರಕಾರ, ಹೋಂ ಡೆಲಿವರಿ ಮಾರಾಟದಿಂದ ಬರುವ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನು ಮದ್ಯವು 2024-25ರಲ್ಲಿ ಮಾರಾಟದ ಆದಾಯ ರೂಪಾಯಿ 19,700 ಕೋಟಿಗಳಾಗಿದ್ದರೆ, ಹಿಂದಿನ ಆದಾಯ 19,050 ಕೋಟಿಗಳಷ್ಟಿತ್ತು.
ಇನ್ನು ಕೇರಳ ಸರ್ಕಾರ ಆನ್‌ಲೈನ್‌ನಲ್ಲಿ ಮದ್ಯ ವಿತರಣೆಗಾಗಿ BEVCO ವಿಶೇಷ ಮೊಬೈಲ್ ಅಪ್ಲಿಕೇಶನ್ ಅನ್ನು ರಚಿಸಿದೆ. ಅದೇ ಸಮಯದಲ್ಲಿ ಪ್ರಮುಖ ಆನ್ಲೈನ್ ವಿತರಣಾ ಕಂಪನಿಗಳಾದ Swiggy ಮತ್ತು Zomato ಈ ಸೇವೆಯ ಭಾಗವಾಗಲು ಆಸಕ್ತಿ ತೋರಿಸುತ್ತಿವೆ.
ಅಪ್ಲಿಕೇಶನ್ ಮೂಲಕ ಆರ್ಡರ್ ಮಾಡುವ ಗ್ರಾಹಕರಿಗೆ ನೇರವಾಗಿ ಮದ್ಯವನ್ನು ಮನೆಗೆ ತಲುಪಿಸಲಾಗುತ್ತದೆ. BEVCO ಪ್ರಸ್ತಾವನೆಯ ಪ್ರಕಾರ, 23 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಆನ್‌ಲೈನ್‌ನಲ್ಲಿ ಮದ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಆರ್ಡರ್ ಮಾಡುವ ಮೊದಲು ವಯಸ್ಸಿನ ಪುರಾವೆಯನ್ನು ತೋರಿಸಬೇಕು. ಈ ನಿಟ್ಟಿನಲ್ಲಿ ಕೆಲವೊಂದು ನಿಯಮಗಳನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು ಎಂಧು ಕೇರಳ ಸರ್ಕಾರ ತಿಳಿಸಿದೆ. (ಏಜೆನ್ಸೀಸ್)