

ಬೆಂಗಳೂರು: ನಾವು ನಿಮಗಾಗಿ ಒಂದು ಟ್ರಿಕಿ ಪಝಲ್ ಅನ್ನು ತಂದಿದ್ದೇವೆ. ಇಂಟರ್ನೆಟ್ನಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಫೋಟೋ ಒಗಟುಗಳು ಅಷ್ಟು ಸುಲಭವಲ್ಲ. ಸರಳ ಮತ್ತು ಸುಲಭವಾಗಿ ಕಾಣುವ ಕಷ್ಟಕರವಾದ ಕಾರ್ಯಗಳು. ಕಣ್ಣುಗಳನ್ನು ಮೋಸಗೊಳಿಸುತ್ತವೆ. ಇಂಥಹದ್ದೆ ಒಂದು ಫೋಟೋ ಜತೆಗೆ ನಾವು ಇಂದು ಬಂದಿದ್ದೇವೆ. ಈ ಮೂಲಕವಾಗಿ ನಾವು ನಿಮಗೆ ಒಂದು ಸವಾಲು ಹಾಕುತ್ತಿದ್ದೇವೆ.
ದೃಷ್ಟಿಭ್ರಮ ಎಂದರೇನು? ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ಮೇಲಿನ ಫೋಟೋವನ್ನು ನೀವು ಗಮನಿಸಿದ್ದೀರಾ? ಕೆಂಪು ಚುಕ್ಕೆಗಳು ಕಾಣುತ್ತಿವೆ ಅಲ್ವಾ? ಆದರೆ ಆ ಚುಕ್ಕೆಗಳ ಹಿಂದೆ ಒಂದು ಸಂಖ್ಯೆ ಅಡಗಿದೆ. ಅದನ್ನು ಕಂಡುಹಿಡಿಯುವುದು ನಿಮ್ಮ ಕೆಲಸ.ಸಾಧ್ಯವಾದರೆ 5 ಸೆಕೆಂಡುಗಳಲ್ಲಿ ಒಗಟು ಪರಿಹರಿಸಿ.
ತುಂಬಾ ಕಷ್ಟ. ಇದು ಅಷ್ಟು ಸುಲಭವಲ್ಲ. ನೀವು ಮೇಲಿನ ಫೋಟೋವನ್ನು ನೋಡಿದರೆ, ನಿಮಗೆ ಏನೂ ಕಾಣಿಸುವುದಿಲ್ಲ. ನೀವು ಹತ್ತಿರದಿಂದ ನೋಡುವ ಮೂಲಕ ಮಾತ್ರ ಒಗಟು ಪರಿಹರಿಸಬಹುದು.ನಿಮ್ಮ ಉತ್ತರವನ್ನು ಕಾಮೆಂಟ್ ರೂಪದಲ್ಲಿ ತಿಳಿಸಿ.
ನೀವು ಉತ್ತರವನ್ನು ಹುಡುಕಿದ್ದರೆ ಶುಭಾಷಯಗಳು. ನೀವು ಅಲ್ಲಿ ಅಡಗಿರುವ ಸಂಖ್ಯೆಗಳು ಪತ್ತೆ ಮಾಡಲು ವಿಫಲವಾಗಿದ್ದಲ್ಲಿ ನಾವೇ ನಿಮಗೆ ಮಾರ್ಕ್ ಮಾಡಿ ಉತ್ತರ ನೀಡಿದ್ದೇವೆ. ಉತ್ತರ 3315. ಮುಂದೆ ಇಂತಹದ್ದೆ ಸವಾಲಿನ ಜತೆ ಮತ್ತೆ ಭೇಟಿಯಾಗೋಣ..