

ಬೆಂಗಳೂರು: ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಕುರಿತಾದ ಕೆಲವು ಪ್ರಶ್ನೆಗಳಿರುವ ಸವಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಹೀಗೆ ನಾವು ನಿಮ್ಮ ಕಣ್ಣು ಮತ್ತು ಜಾಣತನಕ್ಕೊಂದು ಸವಾಲು ನೀಡುತ್ತಿದ್ದೇವೆ.
ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ಈ ಸವಾಲು ನೀವು ತೀಕ್ಷಣವಾದ ದೃಷ್ಟಿ, ಶಕ್ತಿಯುತ ಗಮನ ಮತ್ತು ಅಸಾಧಾರಣ ವೀಕ್ಷಣಾ ಕೌಶಲ್ಯಗಳನ್ನು ಹೊಂದಿರುವಿರಿ ಎಂದು ಸಾಬೀತುಪಡಿಸಬಹುದು. ಈ ಆಪ್ಟಿಕಲ್ ಭ್ರಮೆಯು ನಿಮ್ಮ ಸೃಜನಶೀಲ ಬುದ್ಧಿಮತ್ತೆಯ ಮಟ್ಟವನ್ನು ಪರೀಕ್ಷಿಸಲು ಸಹ ನಿಮಗೆ ಸಹಾಯ ಮಾಡುತ್ತದೆ.
ಇಲ್ಲಿ ಕುಟುಂಬವು ಒಟ್ಟಿಗೆ ಸ್ವಲ್ಪ ಸಮಯವನ್ನು ಆನಂದಿಸುತ್ತಿದೆ. ಪುರುಷ ಪತ್ರಿಕೆ ಓದುತ್ತಿರುವಾಗ ಒಬ್ಬ ಮಹಿಳೆ ತನ್ನ ಕುರ್ಚಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಳೆ. ಅಲ್ಲಿ ಪುಟ್ಟ ಹುಡುಗಿ ತನ್ನ ಗೊಂಬೆಯೊಂದಿಗೆ ಆಟವಾಡುತ್ತಿದ್ದಾಳೆ. ಮೇಜಿನ ಮೇಲೆ ನೀಟಾಗಿ ಇಟ್ಟಿರುವ ದೀಪ ಮತ್ತು ಪುಸ್ತಕಗಳಿಂದ ಕೋಣೆ ಅಚ್ಚುಕಟ್ಟಾಗಿ ಕಾಣುತ್ತದೆ. ಈ ಚಿತ್ರದಲ್ಲಿ ಎರಡು ಬೆಕ್ಕುಗಳು ಬಹಳ ಜಾಣತನದಿಂದ ಅಡಗಿಕೊಂಡಿವೆ. 5 ಸೆಕೆಂಡುಗಳಲ್ಲಿ ಅವರನ್ನು ಗುರುತಿಸಲು ನಾವು ನಿಮಗೆ ಸವಾಲು ಹಾಕುತ್ತೇವೆ.