

ಬೆಂಗಳೂರು: ಆಪ್ಟಿಕಲ್ ಭ್ರಮೆಗಳು ನಮ್ಮ ಮೆದುಳು ಮತ್ತು ಕಣ್ಣುಗಳಿಗೆ ಕೆಲಸ ಕೊಡಲು ರಚಿಸಲಾದ ದೃಶ್ಯ ಚಿತ್ರಗಳಾಗಿವೆ. ಅವುಗಳನ್ನು ದೃಶ್ಯ ಭ್ರಮೆಗಳು ಎಂದೂ ಕರೆಯುತ್ತಾರೆ. ನಾವು ನಿಮಗೆ ಹೀಗೆ ಒಂದು ಸವಾಲನ್ನು ನೀಡುತ್ತಿದ್ದೇವೆ. ಈ ಸವಾಲು ಖಂಡಿತವಾಗಿಯೂ ನಿಮ್ಮ ತಲೆಯನ್ನು ಕೆರೆದುಕೊಳ್ಳುವಂತೆ ಮಾಡುತ್ತದೆ.
ದೃಷ್ಟಿ ಭ್ರಮೆ ಎಂದರೇನು?: ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
ನಿಮ್ಮ ಮೆದುಳಿನ ಶಕ್ತಿಯನ್ನು ಪರೀಕ್ಷಿಸಲು ಮತ್ತು ಸ್ವಲ್ಪ ಮೋಜು ಮಾಡಲು ನೀವು ಸರಳವಾದ ಮಾರ್ಗವನ್ನು ಹುಡುಕುತ್ತಿದ್ದರೆ, ಈಗ ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ನೀಡುತ್ತಿದ್ದೇವೆ.
ಮೇಲೆ ಹಂಚಿಕೊಂಡಿರುವ ಚಿತ್ರದಲ್ಲಿ, ಸುಸಜ್ಜಿತವಾದ ಮಾರ್ಗವನ್ನು ನೀವು ನೋಡಬಹುದು. ಆದರೆ ಈ ಮಾರ್ಗದಲ್ಲಿ ನೆಲಕ್ಕೆ ಹಾಕಿರುವ ಕಲ್ಲುಗಳ ಮಧ್ಯೆ ಒಂದು ಆಮೆ ಅಡಗಿ ಕುಳಿತಿದೆ. 5 ಸೆಕೆಂಡುಗಳಲ್ಲಿ ಆಮೆಯನ್ನು ಕಂಡುಹಿಡಿಯುವುದು ಓದುಗರಿಗೆ ಇರುವ ಸವಾಲಾಗಿದೆ.
ನೀವು ಎಷ್ಟು ಗಮನಿಸುತ್ತಿರುವಿರಿ ಎಂಬುದನ್ನು ಪರೀಕ್ಷಿಸಲು ಇದು ಉತ್ತಮ ಅವಕಾಶವಾಗಿದೆ. ನಿಮ್ಮ ಸಮಯ ಈಗ ಪ್ರಾರಂಭವಾಗುತ್ತದೆ. ಈ ಚಿತ್ರದಲ್ಲಿ ಆಮೆ ಇದೆ. ಸೂಕ್ಷ್ಮವಾಗಿ ಗಮನಿಸಿದರೆ ನೀವು ಸವಾಲನ್ನು ಗೆಲ್ಲಬಹುದಾಗಿದೆ. ನೀವು ಈ ಸವಾಲನ್ನು ಪೂರ್ಣಮಾಡಲು ಸಾಧ್ಯವಾಗಿಲ್ವಾ? ಇನ್ನೂ ನೀವು ಈ ಆಪ್ಟಿಕಲ್ ಭ್ರಮೆಯಲ್ಲಿ ಅಡಗಿರುವ ಎಲ್ಲಾ ಆಮೆಯನ್ನು ಹುಡುಕುತ್ತಿದ್ದರೆ. ಚಿಂತಿಸಬೇಡಿ, ನಾವು ಉತ್ತರವನ್ನು ಕೆಳಗೆ ಹಂಚಿಕೊಂಡಿದ್ದೇವೆ.
ಆಮೆಯು ಚಿತ್ರದ ಬಲಭಾಗದಿಂದ ನಡೆಯುವುದನ್ನು ಕಾಣಬಹುದು, ಇದು ಚಿಕ್ಕದಾಗಿದೆ. ಅದರ ಆಮೆಯ ಚಿಪ್ಪಿನ ಬಣ್ಣವು ಇಟ್ಟಿಗೆಗಳೊಂದಿಗೆ ಸ್ವಲ್ಪ ಮಟ್ಟಿಗೆ ಹೊಂದಿಕೆಯಾಗುವುದರಿಂದ ಮೊದಲ ನೋಟದಲ್ಲಿ ಗಮನಿಸುವುದು ಕಷ್ಟಕರವಾಗಿತ್ತು.