ಬೆಳೆಗಾರರ ಪ್ರಗತಿಗೆ ಆಪ್ಸ್‌ಕೋಸ್ ರಹದಾರಿ

hapcos
ತುಮರಿಯಲ್ಲಿ ಅಡಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ನೂತನ ಕಚೇರಿಯನ್ನು ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಉದ್ಘಾಟಿಸಿದರು. ಎಂ.ಬಿ.ರಮೇಶ್, ನಂದಕುಮಾರ್, ಓಂಕೇಶ್ ಹರತಾಳು, ಸುರೇಶ್ ಈಳಿ, ಭಾಸ್ಕರ ಖಂಡಿಕಾ ಇತರರಿದ್ದರು.
Published on

ಸಾಗರ: ಬೆಳೆಗಾರರ ಸಮಸ್ಯೆಗೆ ಸಂಸ್ಥೆ ನಿರಂತರವಾಗಿ ಸ್ಪಂದಿಸುತ್ತಿದೆ. ಗ್ರಾಮೀಣ ಭಾಗದ ಅಡಕೆ ಬೆಳೆಗಾರರಲ್ಲಿ ಆರ್ಥಿಕ ಚೈತನ್ಯ ತುಂಬಲು ಆಪ್ಸ್‌ಕೋಸ್ ಹೊಸ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಆಪ್ಸ್‌ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಹೇಳಿದರು.
ತಾಲೂಕಿನ ತುಮರಿಯಲ್ಲಿ ಅಡಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ನೂತನ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ತುಮರಿ ಭಾಗದಲ್ಲಿ ಸುಸಜ್ಜಿತ ಗೋದಾಮು ಮತ್ತು ಕಚೇರಿ ತೆರೆಯುವ ಮೂಲಕ ಈ ಭಾಗದ ಷೇರುದಾರ ಸದಸ್ಯರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಾಗರದಲ್ಲಿ ಆಪ್ಸ್‌ಕೋಸ್‌ಯಿಂದ ತೆರೆಯಲಾಗಿರುವ ಕೃಷಿ ಮಳಿಗೆ ಉತ್ತಮ ವಹಿವಾಟು ನಡೆಸುತ್ತಿದ್ದು ಪ್ರತಿದಿನ 2 ರಿಂದ 3 ಲಕ್ಷ ರೂ. ಕೃಷಿ ಪರಿಕರಗಳು ಮಾರಾಟವಾಗುತ್ತಿದೆ. ಇದು ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಿದೆ. ಸಾಗರ ಮಾದರಿಯಲ್ಲಿಯೆ ತುಮರಿ, ನಿಟ್ಟೂರು, ಹೊಸನಗರ ಇನ್ನಿತರೆ ಭಾಗದಲ್ಲಿ ಸಹ ಸುಸಜ್ಜಿತ ಕೃಷಿ ಮಳಿಗೆಯನ್ನು ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಆಪ್ಸ್‌ಕೋಸ್ ಷೇರುದಾರ ಸ್ನೇಹಿಯಾಗಿ ನಿರಂತರ ಕೆಲಸ ಮಾಡಿಕೊಂಡು ಬರುತ್ತಿದೆ. ಈಗಾಗಲೆ ಹೊಸಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸಾಗರದಲ್ಲಿ ಸುಸಜ್ಜಿತ ನೂತನ ಕಚೇರಿ ತೆರೆಯಲಾಗಿದ್ದು ಮಲ್ಟಿಪ್ಲೆಕ್ಸ್ ಮಾರಾಟ ಮಳಿಗೆ ತೆರೆಯಲು ಯೋಜನೆ ರೂಪಿಸಿದೆ. ಷೇರುದಾರ ಸದಸ್ಯರು ಸಂಸ್ಥೆಯೊಂದಿಗೆ ವಹಿವಾಟು ನಡೆಸಿ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಆಪ್ಸ್‌ಕೋಸ್ ನಿರ್ದೆಶಕರಾದ ಎಂ.ಬಿ.ರಮೇಶ್ , ನಂದಕುಮಾರ್, ಓಂಕೇಶ್ ಹರತಾಳು, ಸುರೇಶ್ ಈಳಿ, ಭಾಸ್ಕರ ಖಂಡಿಕಾ, ಕಾರ್ಯದರ್ಶಿ ಲಂಬೋದರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net