

ಕೋಲಾರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಸುಧಾರಣೆಗೆ ಮೀಸಲಿಟ್ಟಿದ್ದ ಅನುದಾವನ್ನು ಅನ್ಯ ಕಾರ್ಯಕ್ಕೆ ರಾಜ್ಯ ಸರ್ಕಾರ ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ, ದಲಿತ ಸಂರ್ಷ ಸಮಿತಿ ಸದಸ್ಯರು ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಮಿತಿಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ಕಲಂ 7ಸಿ ರದ್ದುಪಡಿಸಿ, ವಿವಿಧ ಇಲಾಖೆಗಳ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ, ಎಸ್ಟಿ ಸಮುದಾಯದ ಅನುದಾನ ಬಳಕೆಗೆ ಅವಕಾಶ ನೀಡಿದ್ದು, ಇದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಎಸ್ಸಿ ಮತ್ತು ಎಸ್ಟಿ ಸಮುದಾಯದ ಜನರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ಧವಾಗಿ ಹೊಂದಲು ಕಾಯ್ದೆ ರೂಪಿಸಿದೆ. ಕಾಯ್ದೆಯ ಕಲಂ 73 ಮತ್ತು 7ಸಿ ರಲ್ಲಿ ನಿಗದಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಶೋಷಿತ ಸಮುದಾಯಗಳಿಗೆ ವಂಚಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
38 ಇಲಾಖೆಗಳಲ್ಲಿರುವ ಬ್ಯಾಕ್ಲಾಗ್ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬುವ ಮೂಲಕ ದಲಿತರ ಏಳಿಗೆಗಾಗಿ ಹಾಗೂ ಪರಿಶಿಷ್ಟರ ಹಣ ಬಳಕೆ ಮಾಡದೆ ರ್ನಿಲಕ್ಷ$್ಯತೆವಹಿಸಿ ಸರ್ಕಾರಕ್ಕೆ ವಾಪಸ್ ಹೋಗಲು ಕಾರಣರಾಗಿರುವ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಮುಖ್ಯಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಮಾತನಾಡಿ, ಅನ್ಯ ಯೋಜನೆಗಳಿಗೆ ಎಸ್ಸಿಎಸ್ಪಿ, ಟಿಎಸ್ಪಿ ಹಣ ಉಪಯೋಗಿಸುವಂತೆ ಅವಕಾಶ ಸರ್ಕಾರ ಕಲ್ಪಿಸಿದ್ದು, ಆ ಮೂಲಕ ಅಸ್ಪೃಶ್ಯ ಆಚರಣೆ ಮಾಡುತ್ತಿದೆ. ಮಾಡಿರುವ ತಪು$್ಪ ಮರೆ ಮಾಚಲು ಮೊಸಳೆ ಕಣ್ಣೀರು ಸುರಿಸುತ್ತಿರುವುದನ್ನು ನಿಲ್ಲಿಸಿ ನಯ ವಂಚನೆ ಮಾಡದೆ ಹಣ ಮೀಸಲಿಡಬೇಕು ಎಂದು ಹೇಳಿದರು.
ಸಂಘಟನೆಯ ತಾಲೂಕು ಸಂಚಾಲಕ ಎಸ್. ಎಂ. ವೆಂಕಟೇಶ್ ಮಾತನಾಡಿ, ಕಳೆದ 2023ರ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಒಳ ಮೀಸಲಾತಿ ಹೋರಾಟಗಾರರು ಕಾಂಗ್ರೆಸ್ ಬೆಂಬಲಿಸಿದ ಕಾರಣ ಸರ್ಕಾರ ರಚನೆ ಆಯಿತು. ಇದನ್ನು ಕಾಂಗ್ರೆಸ್ ಮರೆಯಬಾರದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚವ್ವೆನಹಳ್ಳಿ ವಿಜಿ, ಮದನಳ್ಳಿ ವೆಂಕಟೇಶ್, ಮುನಿಚೌಡಪ್ಪ, ಸಂಪತ್ ಕುಮಾರ್, ಗೋವಿಂದರಾಜು, ವೆಂಕಟರಮಣಪ್ಪ, ಮುದುವತ್ತಿ ಕೇಶವ, ಕೋಸಂದ್ರ ರೆಡ್ಡಪ್ಪ, ದೇಶಿಹಳ್ಳಿ ಶ್ರೀನಿವಾಸ್ ಇದ್ದರು.