

ಶಿಕಾರಿಪುರ: ವ್ಯಾಲೆಂಟೈನ್ಸ್ ಡೇ ಆಚರಣೆ ವೇಳೆ ಅನಾಚಾರಗಳನ್ನು ತಡೆಯುವಂತೆ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಪದಾಧಿಕಾರಿಗಳು ತಾಲೂಕು ಕಚೇರಿ, ಡಿವೈಎಸ್ಪಿ ಕಚೇರಿ ಮತ್ತು ಬಿಇಒ ಕಚೇರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು,
ಪ್ರೇಮಿಗಳ ದಿನ ಎನ್ನುವುದು ನಮ್ಮ ಸಂಸ್ಕೃತಿಗೆ ಕಪ್ಪು ಚುಕ್ಕೆಯಾಗುತ್ತಿದೆ. ಕೆಲವು ವರ್ಷಗಳಿಂದ ೆ.14ರಂದು ಆಚರಿಸುತ್ತಿರುವ ವ್ಯಾಲೆಂಟೈನ್ಸ್ ಡೇ ಭಾರತದಲ್ಲಿ ವ್ಯಾಪಕವಾಗಿದೆ. ಪಾಶ್ಚಾತ್ಯರ ವ್ಯಾಪಾರಿ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯ ಪ್ರಚಾರದಿಂದ ಯುವ ಪೀಳಿಗೆ ಅನೈತಿಕತೆಯಲ್ಲಿ ಮುಳುಗುತ್ತಿದೆ ಎಂದು ಸಮಿತಿ ತಾಲೂಕು ಸಂಚಾಲಕ ಪರಶುರಾಮ್ ಆರೋಪಿಸಿದರು.
ಎಲ್ಲ ಕಡೆಗಳಲ್ಲಿ ಪ್ರೇಮಿಗಳ ದಿನಕ್ಕೆ ಪೂರಕವಾಗಿ ನಡೆಯುವ ಪಾರ್ಟಿಗಳಲ್ಲಿ ಯುವಕ, ಯುವತಿಯರು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಸೇವನೆ ಮುಂತಾದ ಅನಾಚಾರಗಳಲ್ಲಿ ತೊಡಗುತ್ತಾರೆ. ಈ ಅನಾಚಾರಗಳನ್ನು ತಡೆಯಲು ವಿವಿಧ ಆಧ್ಯಾತ್ಮಿಕ ಮತ್ತು ಸಮಾಜ ಸೇವಾ ಸಂಸ್ಥೆಗಳು ಇಂತಹ ಸಂಸ್ಕೃತಿ ವಿರುದ್ಧ ಧ್ವನಿ ಎತ್ತಿ ಭಾರತೀಯ ಸಂಪ್ರದಾಯ ಅನುಸರಿಸಲು ಕರೆಕೊಟ್ಟಿವೆ. ಭಾರತೀಯ ಯುವ ಪೀಳಿಗೆಯನ್ನು ಪಾಶ್ಚಾತ್ಯ ಸಂಸ್ಕೃತಿಯತ್ತ ಪ್ರೇರೇಪಿಸಲು ಕುತಂತ್ರ ನಡೆಯುತ್ತಿದೆ ಎಂದು ದೂರಿದರು.
ಪ್ರಮುಖರಾದ ಈರೇಶ್, ವಿ.ರಾಮಣ್ಣ , ಬಿ.ವಿ.ಮಂಜುನಾಥ್, ಎಸ್.ವಿ.ಕೆ.ಮೂರ್ತಿ, ಮೋಹನ್, ಶಿವಯ್ಯ ಶಾಸೀ ಉಪಸ್ಥಿತರಿದ್ದರು.