ಬಸವಣ್ಣ ಭಾವಚಿತ್ರ ವಿರೂಪಗೊಳಿಸಿದ್ದಕ್ಕೆ ವಿರೋಧ

protest
ಹಲಕರ್ಟಿಯಲ್ಲಿ ಬಸವಣ್ಣ ಭಾವಚಿತ್ರ ವಿರೂಪ ಪ್ರಕರಣ ಖಂಡಿಸಿ ರುದ್ರಮುನಿ ಎನ್.ಸಜ್ಜನ್, ಜಗದೀಶ್, ಎಚ್.ಎನ್.ಮಹಾರುದ್ರ, ಬೆನಕಪ್ಪ, ಶಿವಶಂಕರ್, ಚಂದ್ರಶೇಖರ್ ಇತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಕಲಬುರಗಿಯ ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಬಸವಣ್ಣ ಅವರ ಭಾವಚಿತ್ರ ವಿರೂಪಗೊಳಿಸಿರುವುದನ್ನು ವಿರೋಧಿಸಿ ಬಸವಾಭಿಮಾನಿಗಳ ಒಕ್ಕೂಟದಿಂದ ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಬಸವಣ್ಣನವರು ಸಾಮಾಜಿಕ ಸಮಾನತೆ, ಲಿಂಗಸಮಾನತೆಯನ್ನು ಅನುಷ್ಠಾನಗೊಳಿಸಿದವರು. ಸಮಾಜಕ್ಕೆ ಮೌಲ್ಯಗಳನ್ನು ನೀಡಿದವರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಮಾದರಿಯನ್ನು ತೋರಿಸಿಕೊಟ್ಟ ಯುಗಪುರುಷರಾಗಿದ್ದಾರೆ.
ಸಮಾಜ ಸುಧಾರಕ ಬಸವಣ್ಣನ ಭಾವಚಿತ್ರ ವಿರೂಪಗೊಳಿಸಿರುವುದು ಖಂಡನೀಯ. ದೇಶ, ವಿದೇಶದಲ್ಲಿರುವ ಬಸವ ಭಕ್ತರಿಗೆ ಇದರಿಂದ ಆಘಾತವಾಗಿದೆ. ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಅಖಿಲ ಭಾರತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ಪ್ರಮುಖರಾದ ಬೆನಕಪ್ಪ, ಆರ್.ಎಸ್.ಸ್ವಾಮಿ, ಎಚ್.ಎನ್.ಮಹಾರುದ್ರ, ಪರಮೇಶ್ವರ್, ಚಂದ್ರಶೇಖರ್, ಮಲ್ಲಿಕಾರ್ಜುನ, ಶಿವಶಂಕರ್, ಜಗದೀಶ್ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net