ತಾಂತ್ರಿಕ ಕಾರಣಕ್ಕೆ ಮುಂದೂಡಲ್ಪಟ್ಟ ವಿರೋಧ ಪಕ್ಷದ ನಾಯಕನ ೋಷಣೆ

Published on

ಬೆಂಗಳೂರು:
ಮೇಲ್ಮನೆಯ ವಿರೋಧ ಪಕ್ಷದ ನಾಯಕನಾಗಿ ಛಲವಾದಿ ನಾರಾಯಣಸ್ವಾಮಿ ಅವರು ಆಯ್ಕೆಯಾಗಿದ್ದರೂ, ತಾಂತ್ರಿಕ ಕಾರಣಕ್ಕಾಗಿ ಅಧಿಕಾರ ಅಲಂಕರಿಸಲು ಸಾಧ್ಯವಾಗಲಿಲ್ಲ.
ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವುದನ್ನು ಸಭಾಪತಿ ಪರಿಷತ್ತಿನಲ್ಲಿ ಪ್ರಕಟಿಸಿದ ಬಳಿಕ ನಾರಾಯಣಸ್ವಾಮಿ ಅವರು ಆ ಸ್ಥಾನಕ್ಕೆ ಬಂದು ಕೂರಬೇಕಿತ್ತು. ಮಧ್ಯಾಹ್ನದ ಹೊತ್ತಿಗೆ ನಾರಾಯಣಸ್ವಾಮಿ ಪರಿಷತ್ತಿಗೆ ಬಂದರೂ, ಬಿಜೆಪಿ ಕಚೇರಿಯಿಂದ ಪತ್ರ ಬರಲಿಲ್ಲ.
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಭಾಪತಿಗೆ ಅಧಿಕೃತವಾಗಿ ಪತ್ರ ಕಳುಹಿಸಿ ಬಳಿಕ ವಿರೋಧ ಪಕ್ಷದ ನಾಯಕನನ್ನಾಗಿ ಸದನದಲ್ಲಿ ೋಷಣೆ ಮಾಡಲಾಗುತ್ತದೆ.
ಈ ಮೊದಲು ಕಳುಹಿಸಿ ಪತ್ರದಲ್ಲಿ ತಪ್ಪು ಇದ್ದ ಕಾರಣ, ಅದನ್ನು ವಾಪಸ್ಸು ಪಡೆಯಲಾಗಿದ್ದು, ಕಳುಹಿಸಿಕೊಡಲಾಗುವುದು. ಬುಧವಾರ ಸದನದಲ್ಲಿ ವಿರೋಧ ಪಕ್ಷದ ನಾಯಕನ ಅಧಿಕೃತ ೋಷಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net