

Air Chief Marshal AP Singh: ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಐದು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಶನಿವಾರ (ಆಗಸ್ಟ್9) ದೃಢಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ 16 ನೇ ಆವೃತ್ತಿಯ ಏರ್ ಚೀಫ್ ಮಾರ್ಷಲ್ ಎಲ್.ಎಂ. ಕತ್ರೆ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ವಾಯುಪಡೆಯ ಮುಖ್ಯಸ್ಥ, S-400 ವಾಯು ರಕ್ಷಣಾ ವ್ಯವಸ್ಥೆಗಳಿಂದ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದರು. ಐದು ಜೆಟ್‌ಗಳ ಜೊತೆಗೆ, ಒಂದು ದೊಡ್ಡ ವಾಯುಗಾಮಿ ವಿಮಾನವನ್ನು ಸಹ ನಾಶಪಡಿಸಲಾಗಿದೆ ಎಂದು ಅಮರ್ ಪ್ರೀತ್ ಸಿಂಗ್ ತಿಳಿದ್ದಾರೆ.
ಅಲ್ಲದೆ, ನಾವು ಐದು ಯುದ್ದ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ. ಅದರಲ್ಲಿ ಒಂದು ದೊಡ್ಡ ವಿಮಾನವು ಸೇರಿದೆ ಎಂದು ತಿಳಿಸಿದ್ದಾರೆ. ಇದು ELINT ವಿಮಾನ ಅಥವಾ AEW &C ವಿಮಾನವಾಗಿರಬಹುದು. ಇದನ್ನು ಸುಮಾರು 300 ಕಿಲೋಮೀಟರ್ ದೂರದಲ್ಲಿ ನಾಶಪಡಿಸಲಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮೇ 7 ರಂದು ಕಾರ್ಯಾಚರಣೆ ಆರಂಭವಾದ ನಂತರ, ಭಾರತವು ಕೆಲವು ಅತ್ಯಾಧುನಿಕ ಪಾಕಿಸ್ತಾನಿ ವಾಯುಪಡೆಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ದೃಢಪಡಿಸಿತು. ಆದರೆ ನಿಖರವಾದ ಸಂಖ್ಯೆಯನ್ನು ನೀಡಲಿಲ್ಲ. ನಿಖರವಾದ ಸಂಖ್ಯೆಗಳನ್ನು ತಿಳಿದುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ ಎಂದು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ ಭಾರ್ತಿ ಆಗ ಹೇಳಿದ್ದರು.(ಏಜೆನ್ಸೀಸ್)