

ಬೆಂಗಳೂರು: ಬಿಜೆಪಿವರು ಯಾವತ್ತು ಸ್ವಂತ ಬಲದ ಮೇಲೆ ಬಂದಿದ್ದಾರೆ?(When has the BJP come on their own?) ಹಿಂಬಾಗಿಲು ಮೂಲಕವೇ ಬಂದಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ(Madhu Bangarappa) ಪ್ರಶ್ನಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಾಸಕರನ್ನು ರಿಸೈನ್ ಮಾಡಿಸುವುದು, ಅವರನ್ನು ಗೆಲ್ಲಿಸಿಕೊಳ್ಳುವುದು ಬಿಜೆಪಿ ಕೆಲಸ. ಬಿ.ವೈ.ವಿಜಯೇಂದ್ರ ಅವರೇ ಇದರ ಸೂತ್ರದಾರರು ಎಂದು ಟಾಂಗ್ ಕೊಟ್ಟರು.
ಹಿಂದೆ ಮುಂಬೈಗೆ ಕರೆದುಕೊಂಡು ಹೋದವರೂ ಇವರೇ. ಈಗ ಹಳೆಯ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಉಪ ಚುನಾವಣೆ ಮೂರೂ ಕ್ಷೇತ್ರದಲ್ಲಿ ನಮಗೆ ಉತ್ತಮ ಅವಕಾಶವಿದೆ. ಎರಡಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ. ಸಂಡೂರು, ಚನ್ನಪಟ್ಟಣ(Sanduru, Channapattana)ದಲ್ಲಿ ಗೆಲ್ಲುತ್ತೇವೆ. ಶಿಗ್ಗಾಂವಿಯಲ್ಲೂ ಪಕ್ಷಕ್ಕೆ ಉತ್ತಮ ಸ್ಪಂದನೆ ಇದೆ.
ನಮ್ಮ ಅಭ್ಯರ್ಥಿ ಪಠಾಣ್ಗೆ ಜನರ ಬೆಂಬಲ ಇದೆ. ಅಲ್ಲಿಯೂ ನಮಗೆ ಫಲಿತಾಂಶ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಜಮೀರ್ ಅವರ ಹೇಳಿಕೆ ಸರಿಯಲ್ಲ. ಅದು ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬಹುದು. ಯಾರೇ ಆಗಲಿ ಧರ್ಮ, ಜಾತಿ ಬಗ್ಗೆ ಮಾತನಾಡಬಾರದು. ನೋಡಿಕೊಂಡು ಮಾತನಾಡಬೇಕು. ನಾನು ಬಂಗಾರಪ್ಪನವರ ಮಗ. ಹಾಗೆಂದು ಒಂದು ಜಾತಿ ಬಗ್ಗೆ ಮಾತನಾಡುವುದು ಸರಿಯಲ್ಲ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು. ನಮ್ಮ ಮಾತಿನ ಮೇಲೆ ಹಿಡಿತ ಇರಬೇಕು ಎಂದರು.
ವಕ್ಫ್ ಬಗ್ಗೆ ಬಿಜೆಪಿ ಪ್ರತಿಭಟನೆ ಕುರಿತ ಪ್ರಶ್ನೆಗೆ, ಬಿಜೆಪಿಯವರು ಏನು ಬೇಕಾದರೂ ಮಾಡಲಿ. ನಮಗೆ ಇನ್ನೂ ಮೂರುವರೆ ವರ್ಷ ಇದೆ. ಅವರು ಹೋರಾಟ ಮಾಡುತ್ತಲೇ ಇರಲಿ. ವಕ್ಫ್, ಮುಡಾ ಎಲ್ಲದರ ಬಗ್ಗೆ ಮಾಡಲಿ. ಅದಕ್ಕೆಲ್ಲ ಜನರೇ ಉತ್ತರ ಕೊಡುತ್ತಾರೆ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದರು.