ಹೊಸಮನೆಯಲ್ಲಿ ಪೊಲೀಸ್ ಔಟ್‌ಪೋಸ್ಟ್ ತೆರೆಯಿರಿ

manavi
ಹೊಸಮನೆ ಬಡಾವಣೆಯಲ್ಲಿ ಪೊಲೀಸ್ ಹೊರಠಾಣೆ ತೆರೆಯುವಂತೆ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ರೇಖಾ ರಂಗನಾಥ್ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಹೊಸಮನೆ ಬಡಾವಣೆಯಲ್ಲಿ ಪೊಲೀಸ್ ಹೊರಠಾಣೆ ತೆರೆಯುವ ಮೂಲಕ ಶರಾವತಿ ನಗರ ಹಾಗೂ ಹೊಸಮನೆ ಬಡಾವಣೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕೆಂದು ಆಗ್ರಹಿಸಿ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್ ಸೋಮವಾರ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಹೊಸಮನೆ ಬಡಾವಣೆ ಹಾಗೂ ಶರಾವತಿ ನಗರದ ನಾಗರಿಕರ ಹಲವು ವರ್ಷಗಳಿಂದ ಪೊಲೀಸ್ ಹೊರಠಾಣೆಗೆ ಒತ್ತಾಯಿಸುತ್ತಿದ್ದಾರೆ. ಈ ಎರಡೂ ಬಡಾವಣೆಗಳಲ್ಲಿ 26 ಸಾವಿರ ಜನಸಂಖ್ಯೆಯಿದೆ. ಸಾಗರ ರಸ್ತೆಯಿಂದ 100 ಅಡಿ ರಸ್ತೆ ರಾಜೇಂದ್ರ ನಗರದ ವರೆಗೆ ಹಾದು ಹೋಗುವ ಸರ್ವಿಸ್ ರಸ್ತೆಯಲ್ಲಿ ನಾಗಪ್ಪ ದೇವಸ್ಥಾನ ಹಾಗೂ ಮಲೆ ಮಹದೇಶ್ವರ ದೇವಸ್ಥಾನದ ಸಮೀಪ ಸರ್ಕಾರಿ ಜಾಗವಿದೆ. ಇಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು. ಇಲ್ಲಿ ಔಟ್‌ಪೋಸ್ಟ್ ತೆರೆಯುವುದರಿಂದ ಎರಡು ಬಡಾವಣೆಯ ನಾಗರಿಕರ ತುರ್ತು ದೂರುಗಳಿಗೆ ಪೊಲೀಸರು ಸ್ಪಂದಿಸಲು ಅನುಕೂಲವಾಗಲಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ರಸ್ತೆಗಳಲ್ಲಿ ಅನೇಕ ಯುವಕರು ಬೈಕ್‌ಗಳನ್ನು ಅತಿ ವೇಗವಾಗಿ ಓಡಿಸುವ ಮೂಲಕ ಸಾರ್ವಜನಿಕರಿಗೆ ಆತಂಕ ಉಂಟು ಮಾಡುತ್ತಿದ್ದಾರೆ. ಮಾದಕ ವ್ಯಸನಿಗಳು ನಾಗರಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಈ ಭಾಗದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಚೌಕಿ ನಿರ್ಮಾಣ ಅವಶ್ಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net