ಆನ್‌ಲೈನ್ ಲಾಜಿಸ್ಟಿಕ್ ವಂಚನೆ, ನಾಲ್ವರ ಸೆರೆ

cyber crime (1)
Published on

ಬೆಂಗಳೂರು: ಆನ್‌ಲೈನ್ ಪೋರ್ಟರ್ ಲಾಜಿಸ್ಟಿಕ್‌ನಲ್ಲಿ ನಕಲಿ ಆರ್ಡರ್ ಬುಕ್ ಮಾಡಿ, ಕ್ಯಾನ್ಸಲ್ ಮಾಡುವ ಮೂಲಕ ವಂಚಿಸುತ್ತಿದ್ದ ನಾಲ್ವರನ್ನು ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆ ಹಿರಿಸಾವೆ ನಿವಾಸಿ ಚಾಲಕ ಟಿ.ಎಲ್. ಶ್ರೇಯಸ್ (29), ಕೆ.ಜಿ. ನಗರದ ಚಾಲಕ ಕೆ.ಎಸ್. ಕೌಶಿಕ್ (26), ಮಂಡ್ಯದ ಡೆಲಿವರಿ ಬಾಯ್ ಪಿ.ಆರ್. ರಂಗನಾಥ್ (26) ಮತ್ತು ಮದ್ದೂರಿನ ಆಟೋ ಚಾಲಕ ಆನಂದ್ ಕುಮಾರ್ (30) ಬಂಧಿತರು. ಪೋರ್ಟರ್ ಲಾಜಿಸ್ಟಿಕ್ ಆ್ಯಪ್ ಬಳಸಿ ನಕಲಿ ಕಸ್ಟಮರ್ ಐಡಿ ಮತ್ತು ಚಾಲಕರ ಐಡಿ ಸೃಷ್ಟಿಸಿ 8 ತಿಂಗಳಲ್ಲಿ 90 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದ ಆರೋಪಿಗಳು, ಚಾಲಕರು ಕಡಿಮೆ ಇರುವ ಸ್ಥಳದಲ್ಲಿ ೇಕ್ ಡ್ರೈವರ್ ಐಡಿಗಳನ್ನು ಸೃಷ್ಟಿಸುತ್ತಿದ್ದರು. ಜಿಯೋ ೆನ್ಸಿಂಗ್ ಬಳಸಿ ದೂರದ ಸ್ಥಳಗಳಿಗೆ ನಕಲಿ ಕಸ್ಟಮರ್ ಆರ್ಡರ್ ಬುಕ್ ಮಾಡಿ, ಕಸ್ಟಮರ್ ವ್ಯಾಲೆಟ್‌ನಿಂದ ಚಾಲಕನ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿ ಮಾಡುತ್ತಿದ್ದರು. ಚಾಲಕನ ಬ್ಯಾಂಕ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ಕಸ್ಟಮರ್ ತನ್ನ ಆರ್ಡರ್ ಬುಕಿಂಗ್ ಅನ್ನು ರದ್ದುಪಡಿಸಿಕೊಳ್ಳುತ್ತಿದ್ದ. ಪೋರ್ಟರ್ ಲಾಜಿಸ್ಟಿಕ್ ಕಂಪನಿ ಕಡೆಯಿಂದ ಕಸ್ಟಮ್ ವ್ಯಾಲೆಟ್‌ಗೆ ರೀಂಡ್ ಆಗುತ್ತಿತ್ತು. ಚಾಲಕ ಸಹ ಆರ್ಡರ್ ಪೂರ್ಣ ಮಾಡದೆ ಪೋರ್ಟರ್ ಲಾಜಿಸ್ಟಿಕ್ ಕಂಪನಿಗೆ ವಂಚನೆ ಮಾಡುತ್ತಿದ್ದ.

ಇದಲ್ಲದೆ, ಕೆಲವೊಂದು ಸಮಯದಲ್ಲಿ ಜಿಯೋ ೆನ್ಸಿಂಗ್ ಬಳಸಿಕೊಂಡು ಚಾಲಕ, ಟ್ರೀಪ್ ಸ್ಟಾರ್ಟ್ ಮಾಡಿ ಅಲ್ಲಿಯೇ ಎಂಡ್ ಮಾಡುತ್ತಿದ್ದ. ಇದರಿಂದಲೂ ಸಹ ಚಾಲಕನ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತಿತ್ತು. ಪೋರ್ಟರ್ ಕಂಪನಿಯಿಂದ ಬಂದ ರೀಂಡ್ ಅನ್ನು ತಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು. ವಂಚನೆ ಮಾಡುವ ಉದ್ದೇಶಕ್ಕೆ ಕೆಲ ದ್ವಿಚಕ್ರ ವಾಹನಗಳ ನೋಂದಣಿ ನಂಬರ್ ನಮೂದಿಸಿದ್ದಾರೆ. ಇಲ್ಲವಾದರೆ, ತಮ್ಮ ಮನಸ್ಸಿಗೆ ಬಂದ ವಾಹನಗಳ ನೋಂದಣಿ ನಂಬರ್ ಅಪ್‌ಲೋಡ್ ಮಾಡಿ ಪೋರ್ಟರ್ ಲಾಜಿಸ್ಟಿಕ್‌ನಲ್ಲಿ ಚಾಲಕನ ಐಡಿ ನಂಬರ್ ಸೃಷ್ಟಿಸುತ್ತಿದ್ದರು.

ಇತ್ತೀಚೆಗೆ ಪೋರ್ಟರ್ ಲಾಜಿಸ್ಟಿಕ್ ಕಂಪನಿಯಲ್ಲಿ ಆಡಿಟ್ ನಡೆದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಕಂಪನಿಯ ಸಹಾಯಕ ವ್ಯವಸ್ಥಾಪಕ ಎನ್. ಕಿಶೋರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಅಲ್ಪಾವಧಿಯಲ್ಲಿ ಅಧಿಕ ಸಂಪಾದನೆ 

ಆಗ್ನೇಯ ವಿಭಾಗ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್ ಪಿ.ಎಸ್. ಈಶ್ವರಿ ನೇತೃತ್ವದ ತಂಡ ತನಿಖೆ ಕೈಗೊಂಡು ಕಂಪನಿಯ ಬ್ಯಾಂಕ್ ಖಾತೆದಾರರ ಕೆವೈಸಿ ದಾಖಲೆಗಳನ್ನು ಪಡೆದು ಜಾಲಾಡಿದರು. ಅತಿಕಡಿಮೆ ಸಮಯದಲ್ಲಿ ಅತಿಹೆಚ್ಚು ಹಣ ಸಂದಾಯ ಆಗಿರುವ ಖಾತೆದಾರರ ಕೆವೈಸಿ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟ ವ್ಯಕ್ತಿಗಳ ಮೊಬೈಲ್ ನಂಬರ್ ಮತ್ತು ಜಾಲತಾಣದ ಖಾತೆಗಳು, ತಾಂತ್ರಿಕ ಮಾಹಿತಿಯನ್ನು ಕಲೆ ಹಾಕಿ ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದರು. ಮೊದಲಿಗೆ ಹಾಸನದ ಹಿರಿಸೇವೆ ವೃತ್ತದ ಬಳಿ ನಿಂತಿದ್ದ ಶ್ರೇಯಸ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳು ಪತ್ತೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net