ಆನ್​ಲೈನ್​ ಗೇಮಿಂಗ್​ ಪ್ರಕರಣ : ಚಿತ್ರದುರ್ಗ ಶಾಸಕ ಕೆ.ಸಿ .ವಿರೇಂದ್ರ ಪಪ್ಪಿ ಮೇಲೆ ಇಡಿ ದಾಳಿ! | online gaming case

untitled-design-2025-08-22t164503543-68a851440bcd6
Published on

online gaming case : ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರ ಚಳ್ಳಕೆರೆ ನಗರದ ನಿವಾಸ, ಕಚೇರಿ ಮೇಲೆ ಶುಕ್ರವಾರ ಬೆಳ್ಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬೆಳಗ್ಗೆ 6.30ರ ಹೊತ್ತಿಗೆ ಎಂಟು ಇನ್ನೋವಾ ಖಾಸಗಿ ಕಾರುಗಳಲ್ಲಿ ಧಾವಿಸಿರುವ ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳು ಚಳ್ಳಕೆರೆ ಹಳೇ ಟೌನ್‌ ವೀರಭದ್ರ ಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಶಾಸಕರ ನಿವಾಸ ಮೇಲೆ ಹಾಗೂ ಶಾಸಕರ ಸಹೋದರರ ಕೆ.ಸಿ.ನಾಗರಾಜ್, ಕೆ.ಸಿ.ತಿಪ್ಪೇಸ್ವಾಮಿ ಹಾಗೂ ಸಂಬಂಧಿಸಿ ಹೊಸಮನೆ ಸ್ವಾಮಿ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಚಳ್ಳಕೆರೆಯೊಂದಿಗೆ ಬೆಂಗಳೂರು, ಗೋವಾ, ರಾಜಸ್ಥಾನ ಮತ್ತಿತರ ಕಡೆಗಳಲ್ಲೂ ದಾಳಿಯಾಗಿದ್ದು,ದಾಳಿ ಸಂದರ್ಭದಲ್ಲಿ ಚಳ್ಳಕೆರೆ ನಿವಾಸದಲ್ಲಿ ಶಾಸಕರು ಇರಲಿಲ್ಲ. ಅವರನ್ನು ಸಿಕ್ಕಿಂನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಶಾಸಕರ ಸಹೋದರ ಹೇಳಿದ್ದೇನು?

ಈ ಕುರಿತ ಶಾಸಕರ ಸಹೋದರ ಕೆ.ಸಿ.ನಾಗರಾಜ್ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಿಂದ ಇಂದು ನಾನು ಬಂದಿದ್ದೇನೆ. ಶಾಸಕರೂ ಬರಲಿದ್ದಾರೆ. ಯಾವ ಕಾರಣಕ್ಕೆ ದಾಳಿ ನಡೆದಿದೆ ಗೊತ್ತಿಲ್ಲ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಎಂದಿದ್ದಾರೆ. ದಾಳಿ ಕುರಿತಂತೆ ಇಡಿ ಬೆಂಗಳೂರಿನ ಅಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದು, ಕೆ.ಸಿ.ವಿರೇಂದ್ರ ಮತ್ತು ಇತರರು ಸೇರಿ 30 ಕಡೆ ದಾಳಿ ನಡೆಸಲಾಗಿದೆ.

ಎಲ್ಲಿಲ್ಲಿ ಇಡಿ ರೈಡ್​

ಚಿತ್ರದುರ್ಗ ಜಿಲ್ಲೆಯ 6ಕಡೆ, ಬೆಂಗಳೂರು ನಗರದಲ್ಲಿ 10, ರಾಜಸ್ಥಾನ ಜೋದ್‌ಪುರದಲ್ಲಿ 3, ಹುಬ್ಬಳ್ಳಿಯಲ್ಲಿ 1,ಮುಂಬೈನಲ್ಲಿ 2 ಕಡೆ,ಗೋವಾದಲ್ಲಿ 5 ಕ್ಯಾಸಿ ಸೇರಿ ಎಂಟು ಕಡೆ ಹಾಗೂ ಜೋದ್‌ಪುರದಲ್ಲಿ 3 ಕಡೆ, ಹುಬ್ಬಳ್ಳಿ 1ಕಡೆ, ಮುಂಬೈನಲ್ಲಿ 2 ಕಡೆ ದಾಳಿ ನಡೆದಿದೆ. ಅಕ್ರಮ ಆನ್‌ಲೈನ್, ಆಫ್‌ಲೈನ್‌ ಬೆಟ್ಟಿಂಗ್ ಪ್ರಕರಣ, ಕೆ.ಸಿ. ವಿರೇಂದ್ರ, ಸಹೋದರ ಕೆ.ಸಿ.ತಿಪ್ಪೇಸ್ವಾಮಿಗೆ ಸೇರಿದ ದುಬೈನ 3 ವ್ಯವಹಾರಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net