VIDEO| ಲೈವ್ ವಿಡಿಯೋ ಕಾಲ್​ನಲ್ಲೇ ನೆರವೇರಿತು ನಿಶ್ಚಿತಾರ್ಥ: ಗುಜರಾತ್​ನಲ್ಲಿ ಆನ್​ಲೈನ್​ ಎಂಗೇಜ್​ಮೆಂಟ್​!

ONLINE
Published on

ಅಹಮದಾಬಾದ್: ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಸಂಪ್ರದಾಯಗಳೂ ಕೂಡ ಈಗ ಡಿಜಿಟಲೀಕರಣವಾಗುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಗುಜರಾತ್​ನ ಕುಟುಂಬವೊಂದು ವಿಡಿಯೋ ಕಾಲಿಂಗ್ ಮೂಲಕವೇ ಯುವಕ- ಯುವತಿಯ ನಿಶ್ಚಿತಾರ್ಥ ನೆರವೇರಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಯುವಕ ಮತ್ತು ಯುವತಿ ಇಬ್ಬರೂ ಬೇರೆ ಬೇರೆ ಸ್ಥಳಗಳಲಿದ್ದಿದ್ದರಿಂದ ಕುಟುಂಬಸ್ಥರು ಇಬ್ಬರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕ ಮಾಡಿ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಅಕ್ಕಪಕ್ಕ ಮಣೆ ಹಾಕಿ ಎರಡು ಮೊಬೈಲ್​ಗಳನ್ನಿಟ್ಟು ಶಾಸ್ತ್ರಗಳನ್ನು ನಡೆಸಲಾಗಿದೆ.

ಕುಟುಂಬದ ಮಹಿಳೆಯರು ಯುವತಿಯ ಮೊಬೈಲ್​ಗೆ ಅರಿಶಿಣ, ಕುಂಕುಮ ಹಚ್ಚಿ, ಸೀರೆ ಇಟ್ಟು ಸಂಪ್ರದಾಯಗಳನ್ನು ನಡೆಸಿದ್ದಾರೆ. ಈ ಹಿಂದೆ ಕೂಡ ವಿಡಿಯೋ ಕಾಲಿಂಗ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡ ಅನೇಕ ಘಟನೆಗಳು ನಡೆದಿದ್ದವು.

ಆದರೆ, ಇದೇ ಮೊದಲ ಬಾರಿ ಯುವಕ-ಯುವತಿ ಇಬ್ಬರೂ ಇಲ್ಲದಿದ್ದರೂ ನಿಶ್ಚಿತಾರ್ಥ ನಡೆಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net