ವಾಟ್ಸ್‌ಆ್ಯಪ್ ಮೂಲಕ ಆನ್‌ಲೈನ್ ವಂಚನೆ: ಪ್ರತಿಷ್ಠಿತ ವ್ಯಕ್ತಿಗಳು, ಅಧಿಕಾರಿಗಳ ನಕಲಿ ಖಾತೆ ಸೃಷ್ಟಿಸಿ ಹಣ ವಸೂಲಿ ದಂಧೆ

18-cpt-4pa
Published on

ಚನ್ನಪಟ್ಟಣ : ನಕಲಿ ಖಾತೆ ರಚಿಸಿಕೊಂಡು ಹಣ ಕೀಳುತ್ತಿದ್ದ ಖದೀಮರು ಈ ಮಧ್ಯೆ ವಾಟ್ಸ್‌ಆ್ಯಪ್ ಮೂಲಕ ಆನ್‌ಲೈನ್ ವಂಚನೆಯಲ್ಲಿ ತೊಡಗಿದ್ದಾರೆ.

ಸವಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ೇಸ್‌ಬುಕ್ ಖಾತೆಗಳನ್ನು ಟಾರ್ಗೆಟ್ ವಾಡುತ್ತಿರುವ ವಂಚಕರ ತಂಡ, ಅವರ ಸ್ನೇಹಿತರ ಪಟ್ಟಿಯಲ್ಲಿರುವವರಿಗೆ ಮೊದಲು ಹಾಯ್, ಹಲೋ, ಹೇಗಿದ್ದೀರಾ ಎಂಬ ಸಂದೇಶ ಕಳುಹಿಸುತ್ತಾರೆ. ಆ ಕಡೆಯಿಂದ ಪ್ರತಿಕ್ರಿಯೆ ಬಂದ ತಕ್ಷಣ ನೇರವಾಗಿ ವಿಷಯಕ್ಕೆ ಬರುವ ಖದೀಮರು, ತುರ್ತು ಹಣದ ಅವಶ್ಯಕತೆಯಿದೆ. ಗೂಗಲ್ ಪೇ ಅಥವಾ ೆನ್ ಪೇ ಮೂಲಕ ಹಣ ಕಳುಹಿಸುವಂತೆ ಮನವಿ ವಾಡಿ ಹಣ ದೋಚುತ್ತಿರುವುದು ಕಂಡುಬಂದಿದೆ.

ವಾಟ್ಸ್ ಆ್ಯಪ್‌ಗೂ ಎಂಟ್ರಿ : ಇಷ್ಟು ದಿನ ಫೇಸ್‌ಬುಕ್‌ನಲ್ಲಿ ಜನರನ್ನು ಯವಾರಿಸುತ್ತಿದ್ದ ಖದೀಮರು ಇದೀಗ, ವಾಟ್ಸ್‌ಆ್ಯಪ್‌ಗೂ ಎಂಟ್ರಿಯಾಗಿದ್ದಾರೆ. ಫೇಸ್‌ಬುಕ್ ಬಳಕೆದಾರರಲ್ಲಿ ಹಲವರು ಸಂಪರ್ಕ ಸಂಖ್ಯೆ ನೀಡಿರುತ್ತಾರೆ. ಈ ನಂಬರ್ ಕಲೆಹಾಕುವ ಖದೀಮರು, ಆ ಸಂಖ್ಯೆಯ ಡಿಪಿಗೆ ಪ್ರತಿಷ್ಠಿತರ ೆಟೋ ಹಾಗೂ ಹೆಸರು ಹಾಕಿಕೊಂಡು ಸಂದೇಶ ಕಳುಹಿಸುತ್ತಿದ್ದಾರೆ. ಇಲ್ಲೂ ಕೂಡ ಅದೇ ರೀತಿಯಾಗಿ ಯವಾರಿಸುವ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಸಾವಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಫೇಸ್‌ಬುಕ್‌ಗೆ ಹೆಚ್ಚಾಗಿ ಅಂಟಿಕೊಂಡಿದ್ದಾರೆ. ಈ ಜಾಲತಾಣವನ್ನು ವಂಚನೆಗಾಗಿ ಕೆಲವರು ಬಳಸಿಕೊಳ್ಳುತ್ತಿದ್ದು, ಬಳಕೆದಾರರು ನಿಗಾವಹಿಸಬೇಕಾಗಿದೆ. ಅನುಮಾನಾಸ್ಪದ ರೀತಿಯ ಸಂದೇಶಗಳು ಬಂದ ಕೂಡಲೇ, ಪೊಲೀಸರಿಗೆ ದೂರು ನೀಡಬೇಕು. ಈ ಪ್ರಕರಣಗಳನ್ನು ಇಲಾಖೆಯೂ ಗಂಭೀರವಾಗಿ ಪರಿಗಣಿಸಿದೆ.

ಕೆ.ಎನ್.ರಮೇಶ್ ಡಿವೈಎಸ್‌ಪಿ

ಖಾಕಿಗೂ ಡೋಂಟ್‌ಕೇರ್ : ಆನ್‌ಲೈನ್ ವಂಚನೆಗೆ ನಿಯಂತ್ರಣವಿಲ್ಲದಂತಾಗಿದೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಹೆಸರಿನಲ್ಲಿಯೇ ಇವರು ಬಲೆ ಬೀಸುತ್ತಿರುವುದು ಉದಾಹರಣೆ. ಜಿಲ್ಲೆಯಲ್ಲಿ ಈ ಸಂಬಂಧ ನೂರಾರು ಪ್ರಕರಣಗಳು ಕಂಡುಬಂದಿವೆ. ಈ ಹಿಂದೆ ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆ ಪಿಎಸ್‌ಐ ಆಗಿ ಕರ್ತವ್ಯನಿರ್ವಹಿಸಿದ ಅಧಿಕಾರಿಯೊಬ್ಬರ ಹೆಸರು ಮತ್ತು ೆಟೋ ಇರುವ ವಾಟ್ಸ್ ಆ್ಯಪ್ ನಂಬರ್‌ನಿಂದ ಹಲವರಿಗೆ ಹಣಕ್ಕೆ ಬೇಡಿಕೆ ಇಟ್ಟಿರುವ ಸಂದೇಶ ರವಾನೆಯಾಗಿರುವುದು ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net