

Online Adult Content : ಹೈದರಾಬಾದ್ ನಗರದ ಅಂಬರ್‌ಪೇಟೆ ಪ್ರದೇಶದಲ್ಲಿ ದಂಪತಿ ನಡೆಸುತ್ತಿದ್ದ ಲೈವ್ ನ್ಯೂಡ್ (ಬೆತ್ತಲೆ) ವಿಡಿಯೋ ವ್ಯವಹಾರವು ನಗರದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
ಖತರ್ನಾಕ್ ದಂಪತಿ ಸ್ಪಷ್ಟ ಯೋಜನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಅಲ್ಲದೆ, ಹಣ ತೆಗೆದುಕೊಂಡು ಜನರಿಗೆ ಲಿಂಕ್‌ಗಳನ್ನು ಕಳುಹಿಸುತ್ತಿದ್ದರು ಅನ್ನೋ ಆಘಾತಕಾರಿ ಸಂಗತಿ ಟಾಸ್ಕ್ ಫೋರ್ಸ್ ಪೊಲೀಸರ ದಾಳಿಯಿಂದ ಬಹಿರಂಗವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಈ ದಂಪತಿ ತಮ್ಮ ನಗ್ನ ವಿಡಿಯೋಗಳನ್ನು ಇನ್ಸ್ಟಾಗ್ರಾಂ ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ “ಸ್ವೀಟ್ ತೆಲುಗು ಕಪಲ್ 2027” ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಲೈವ್ ಲಿಂಕ್ ವೀಕ್ಷಿಸಲು 2000 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ರೆಕಾರ್ಡ್ ಮಾಡಿದ ವಿಡಿಯೋಗಳಿಗೆ 500 ರೂ. ಶುಲ್ಕ ವಿಧಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ವಿಡಿಯೋ ಚಿತ್ರೀಕರಣಕ್ಕಾಗಿ ತಮ್ಮ ವಸತಿ ಕಟ್ಟಡದಲ್ಲಿ ಕ್ಯಾಮೆರಾಗಳು, ಲೈಟಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ಉಪಕರಣಗಳೊಂದಿಗೆ ವಿಶೇಷ ಸೆಟಪ್ ಅನ್ನು ದಂಪತಿ ಸ್ಥಾಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಕೆಲವರಿಂದ ಸಿಕ್ಕ ಮಾಹಿತಿಯ ಆಧಾರದ ಮೇಲೆ, ಟಾರ್ಸ್ ಫೋರ್ಸ್ ಪೊಲೀಸರು ದಂಪತಿ ಮನೆಯ ಮೇಲೆ ದಾಳಿ ನಡೆಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಈ ದಾಳಿಯಲ್ಲಿ, ಅಧಿಕಾರಿಗಳು ಲಿಂಕ್ ಹಂಚಿಕೆಗೆ ಬಳಸಲಾದ ಕ್ಯಾಮೆರಾಗಳು, ಲೈವ್ ಸ್ಟ್ರೀಮಿಂಗ್ ಸಾಧನಗಳು, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ದಂಪತಿಯನ್ನು ಬಂಧಿಸಿ ಸಂಬಂಧಿತ ಐಟಿ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಅಂಬರ್‌ಪೇಟೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವುದು, ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಚಾರ ಮಾಡುವುದು ಗಂಭೀರ ಅಪರಾಧ ಎಂದು ಹೇಳಿದ್ದಾರೆ. ಇನ್ನು ಮುಂದೆ ಇಂತಹ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ಇಡುವುದಾಗಿ ಅವರು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)