ಈರುಳ್ಳಿ ತುಂಬಿದ್ದ ಲಾರಿಯಲ್ಲಿ ಅವಘಡ: ವಿದ್ಯುತ್​ ತಂತಿ ತಗುಲಿ ಮಹಿಳೆ ಸಾವು

fire accident
Published on

ವಿಜಯಪುರ: ವಿದ್ಯುತ್ ರೂಪದಲ್ಲಿ ಬಂದ ಜವರಾಯ ಈರುಳ್ಳಿ ತುಂಬಿದ್ದ ಲಾರಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕ ಮಹಿಳೆಯನ್ನ ಬಲಿ ಪಡೆದ ಘಟನೆ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದ ಬಳಿ ನಡೆದಿದೆ.

ತೆಲಗಿ ಗ್ರಾಮದ ನಿವಾಸಿ ಸಕ್ಕೂಬಾಯಿ ವಾಲಿಕಾರ(22) ಮೃತ ದುರ್ದೈವಿ. ಕೂಲಿ ಅರಸಿ ಬಂದಿದ್ದ ಈಕೆ ಈರುಳ್ಳಿ ತುಂಬಿದ್ದ ಲಾರಿಯಲ್ಲಿ ಹೋಗುತ್ತಿದ್ದಳು. ಮಾರ್ಗಮಧ್ಯೆ ರಸ್ತೆಗೆ ಅಡ್ಡಲಾಗಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾಳೆ. ಕೂಡಗಿ ಎನ್​ಟಿಪಿಸಿ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net